ನವದೆಹಲಿ: ಇಲ್ಲಿನ ಲೋಧಿ ಕಾಲೋನಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ದುರಂತ ಅಂತ್ಯ ಕಂಡಿದ್ದಾರೆ.
ಮಂಗಳವಾರ (ಜು.21) ಬೆಳಿಗ್ಗೆ ಲೋಧಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕೆ ದತ್ ಕಾಲೋನಿಯಲ್ಲಿ ಅವಘಡ ಸಂಭವಿಸಿದೆ. ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಮನೆಗೆ ಬೆಂಕಿ ಆವರಿಸಿದ್ದು, ತಾಯಿ ಮತ್ತು ಅವರಿಬ್ಬರ ಪುತ್ರಿಯರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೈಸೂರು | ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣು
ಬೆಳಿಗ್ಗೆ 10:21ರ ಸುಮಾರಿಗೆ ದೆಹಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ 11:10ರ ವೇಳೆಗೆ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಇದಕ್ಕೂ ಮುನ್ನ ಬೆಳಗಿನ ಜಾವ, ಪಶ್ಚಿಮ ದೆಹಲಿಯ ಫತೇಹ್ ನಗರದ ಪಾರ್ಕಿಂಗ್ ಪ್ರದೇಶವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಜೈಲ್ ರಸ್ತೆಯ ರಣಬೀರ್ ಬೇಕರಿ ಬಳಿಯ ಮನೆಯೊಂದರಲ್ಲಿ ಬೆಳಿಗ್ಗೆ 3:50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.ಇದನ್ನೂ ಓದಿ:ಸ್ಪೇನ್ ನ ಒಂದು ಗೋಲ್‌ನಿಂದ ಮಿಯಾ ಖಲೀಫಾಗೆ ಸಿಕ್ತು 15.92 ಕೋಟಿ!
