Crime
14 ದಿನದ ಮಗುವನ್ನ 3ನೇ ಮಹಡಿಯಿಂದ ಎಸೆದ ತಾಯಿ

– ಗಂಡನಿಂದ ದೂರವಾಗಿ ತವರು ಸೇರಿದ್ದ ಮಹಿಳೆ
ಹೈದರಾಬಾದ್: 14 ದಿನದ ಮಗುವನ್ನು ತಾಯಿಯೇ ಮೂರನೇ ಮಹಡಿಯಿಂದ ಎಸೆದು ಕೊಂದಿರುವ ಭಯಾನಕ ಘಟನೆ ಆಂಧ್ರ ಪ್ರದೇಶದ ಫತೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಲಾವಣ್ಯ ಮಗುವನ್ನ ಎಸೆದ ತಾಯಿ. 2016ರಲ್ಲಿ ಲಾವಣ್ಯ ಮದುವೆ ನೇತಾಜಿನಗರದ ವೇಣುಗೋಪಾಲ್ ಜೊತೆ ಮದುವೆಯಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಎರಡನೇ ಮಗುವಿನ ತಾಯಿಯಾಗುವ ವೇಳೆ ತವರು ಸೇರಿದ್ದಳು. ತವರು ಮನೆ ಸೇರಿದ ಕೆಲ ದಿನಗಳಲ್ಲೇ ಲಾವಣ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಪೋಷಕರು ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗರ್ಭಿಣಿ ಪುತ್ರಿಯನ್ನು ಬದುಕಿಸಿಕೊಂಡಿದ್ದರು. ಈ ವೇಳೆ ಲಾವಣ್ಯಗೆ ಶಸ್ತ್ರಚಿಕಿತ್ಸೆ ಮಾಡಿಸಿ ಹೆರಿಗೆ ಮಾಡಿಸಲಾಗಿತ್ತು. ಲಾವಣ್ಯ ವಿಷ ಸೇವಿಸಿದ್ರೂ ವೈದ್ಯರು ಮಗುವನ್ನು ಉಳಿಸಿಕೊಂಡಿದ್ದರು.
ಮೂರನೇ ಮಹಡಿಯಿಂದ ಮಗ ಸ್ಥಳದಲ್ಲೇ ಸಾವನ್ನಪ್ಪಿದೆ. ಮಹಿಳೆಗೆ ಮೂರು ವರ್ಷದ ಒಂದು ಮಗು ಇದೆ. ಐಪಿಸಿ ಸೆಕ್ಷನ್ 302ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಫತೇನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
