Monday, 20th May 2019

Recent News

ಗೋಕರ್ಣ ರೆಸಾರ್ಟ್‌ನಲ್ಲಿ ಸ್ನಾನ ಮಾಡುತ್ತಿದ್ದ ಅಪ್ರಾಪ್ತೆ ವಿಡಿಯೋ ಚಿತ್ರೀಕರಣ: ದೂರು ದಾಖಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಕಾಮುಕರು ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯರ ಸ್ನಾನ ಮಾಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ಗೋಕರ್ಣದ ಮೇನ್ ಬೀಚ್ ಬಳಿ ಇರುವ ಗೋಕರ್ಣ ಅಡ್ವೆಂಚರ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾಗ ತನ್ನ ಅಪ್ರಾಪ್ತ ವಯಸ್ಸಿನ ಮಗಳು ಮತ್ತು ಆಕೆಯ ಸ್ನೇಹಿತೆ ಸ್ನಾನ ಮಾಡುತ್ತಿರುವುದನ್ನು ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದೆ. ಪಕ್ಕದ ರೂಮಿನಿಂದ ಕೆಲವರು ಮೊಬೈಲಿನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎಂದು ಬೆಂಗಳೂರಿನ ಮಹಿಳೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಪ್ರಿಲ್ 20ರಂದು ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯ ಜೊತೆ ಸ್ನಾನ ಮಾಡುತ್ತಿದ್ದಳು. ಆಗ ಪಕ್ಕದ ರೂಮಿನ ಬಾತ್ ರೂಂ ಗೋಡೆ ಮೇಲಿನಿಂದ ಯಾರೋ ಮೊಬೈಲ್ ಮೂಲಕ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿದ್ದಾರೆ. ಅಂದು ಪಕ್ಕದ ರೂಮಿನಲ್ಲಿ ಬೆಂಗಳೂರಿನ ನಿವಾಸಿಗಳಾದ ನಿರಂಜನ್, ಪಂಡಿತ್ ಸುಭಾಷ್, ಕೃಷ್ಣನ್ ತಂಗಿದ್ದರು. ಅವರೇ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಮಹಿಳೆ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆ ಪಿಎಸ್‍ಐ ಸಂತೋಷ್ ಕುಮಾರ್ ಐಪಿಸಿ ಸೆಕ್ಷನ್ 354(ಸಿ) ಮತ್ತು 12 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ತಡವಾಗಿ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *