Connect with us

Latest

ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ – ಕ್ಯಾಮೆರಾ ವೈಶಿಷ್ಟ್ಯಗಳೇನು?

Published

on

ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ದಿಗ್ಗಜ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ವಿಶ್ವದ ಮೊದಲ ಪೆಂಟಾ ಕ್ಯಾಮೆರಾ ಇರುವ ಫೋನನ್ನು ನವೆಂಬರ್ 6 ರಂದು ಬಿಡುಗಡೆ ಮಾಡಲಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಕ್ಸಿಯೋಮಿ ತಿಳಿಸಿದ್ದು ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಕ್ಯಾಮೆರಾ ವೈಶಿಷ್ಟ್ಯತೆ ಏನು?
ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್  ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ಇರಲಿದೆ.

ಹಿಂದೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರೆಡ್‌ಮೀ ನೋಟ್ 8 ಪ್ರೋ ಫೋನನ್ನು ಬಿಡುಗಡೆ ಮಾಡಿದ ಬಳಿಕ ಕ್ಸಿಯೋಮಿ ಸ್ಯಾಮ್‌ಸಂಗ್ ಕಂಪನಿ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಸೆನ್ಸರ್ ಬಳಸಿ ಈ ಫೋನ್ ತಯಾರಿಸಲು ಮುಂದಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು.

ಸ್ಯಾಮ್‍ಸಂಗ್ ಕಂಪನಿ ಐಎಸ್‍ಒಸಿಇಎಲ್‍ಎಲ್ ಬ್ರೈಟ್ ಎಚ್‍ಎಂಎಕ್ಸ್ ಸೆನ್ಸರ್ ಅಭಿವೃದ್ಧಿ ಪಡಿಸಿದೆ. 108 ರೆಸಲ್ಯೂಷನ್ ಮೆಗಾ ಪಿಕ್ಸೆಲ್ ಚಿತ್ರವನ್ನು ತೆಗೆಯಬಹುದಾದ ಮೊದಲ ಇಮೇಜ್ ಸೆನ್ಸರ್ ಇದಾಗಿದೆ. 10,80,00,000 ಪಿಕ್ಸೆಲ್(10.80 ಕೋಟಿ ಪಿಕ್ಸೆಲ್) 12032*9024 ರೆಸಲ್ಯೂಷನ್ ಹೊಂದಿರುವ ಫೋಟೋವನ್ನು ಈ ಕ್ಯಾಮೆರಾ ಸೆನ್ಸರ್ ಮೂಲಕ ತೆಗೆಯಬಹುದಾಗಿದೆ.

ಫೋನಿನ ಗುಣವೈಶಿಷ್ಟ್ಯತೆಗಳೇನು?
ಕ್ಯಾಮೆರಾ ವೈಶಿಷ್ಟ್ಯತೆ  ಮಾತ್ರ ಈಗ ಬಹಿರಂಗವಾಗಿದ್ದು ಇನ್ನಿತರ ಮಾಹಿತಿ ಬಹಿರಂಗವಾಗಿಲ್ಲ. ಆದರೂ ಕೆಲ ಟೆಕ್ ಸೈಟ್‌ಗಳು ಪ್ರಕಟಿಸಿದಂತೆ 6ಜಿಬಿ, 8ಜಿಬಿ, 12 ಜಿಬಿ ರ‍್ಯಾಮ್, 64 ಜಿಬಿ, 128 ಜಿಬಿ, 256 ಜಿಬಿ ಆಂತರಿಕ ಮೆಮೊರಿ, 6.47 ಇಂಚಿನ ಫುಲ್ ಎಚ್‌ಡಿ(1080*2340 ಪಿಕ್ಸೆಲ್) ಒಎಲ್‌ಇಡಿ ಸ್ಕ್ರೀನ್,  ಕ್ವಾಲಕಂ ಸ್ನಾಪ್ ಡ್ರಾಗನ್ 730 ಜಿ ಪ್ರೊಸೆಸರ್, 5026 ಎಂಎಎಚ್ ಬ್ಯಾಟರಿ ಹೊಂದಿರಲಿದೆ ಎಂದು ವರದಿಯಾಗಿದೆ. ಈ ಫೋನಿನ ಬೆಲೆ ಎಷ್ಟು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 25 ಸಾವಿರ ರೂ. ಇರಬಹುದು ಎನ್ನಲಾಗುತ್ತಿದೆ.