– ಹಾರ್ದಿಕ್ ಪಾಂಡ್ಯರನ್ನ ಹೊರದಬ್ಬಲು ಮುಂದಾಯ್ತಾ ಮುಂಬೈ?
– ಡೆಲ್ಲಿ ಸಹಾಯಕ ಕೋಚ್ ಆಗಿ ಯುವರಾಜ್, ಚಮಿಂಡ ವಾಸ್ ವೇಗದ ಬೌಲಿಂಗ್ ಕೋಚ್
ಮುಂಬೈ: 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ನಡೆಯಲಿರುವ ಮಿನಿ ಹರಾಜಿಗೂ ಮುನ್ನವೇ ಫ್ರಾಂಚೈಸಿಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.
“Mumbai Indians has been a very special part of my journey for over a decade now. The players, coaching team, the incredible support of the #OneFamily and above all the fans have made this an experience I will always treasure.
Together, we have shared some unforgettable moments, overcome challenges and built something we can all be proud of.
I want to sincerely thank Mrs. Nita Ambani and Akash Ambani for their unwavering trust, support and friendship over the years.
I leave with immense pride in what we have achieved together and will always carry a special place in my heart for MI. I wish the team every success in the years ahead.”
– Mahela Jayawardene
— Mumbai Indians (@mipaltan) October 17, 2026
ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಮಹೇಲ ಜಯವರ್ಧನೆ (Mahela Jayawardene) ಮುಂಬೈ ತಂಡದ ಮುಖ್ಯಕೋಚ್ ಹುದ್ದೆಗೆ ಗುಡ್ಬೈ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಜಯವರ್ಧನೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
Forever a part of our MI Paltan. Thank you for everything, MJ 💙 https://t.co/BBQuZd1M3u
— Mumbai Indians (@mipaltan) October 17, 2026
ಪಾಂಡ್ಯ ಔಟ್ ಸಾಧ್ಯತೆ; ಕ್ಯಾಪ್ಟನ್ ರೇಸಲ್ಲಿ ಹಿಟ್ಮ್ಯಾನ್?
ಈ ಬೆಳವಣಿಗೆ ಮಧ್ಯೆ ಮುಂಬೈ ಇಂಡಿಯನ್ಸ್ ತಂಡ ಮತ್ತೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವದ ಹೊಣೆ ನೀಡಲು ಮುಂದಾಗಿದೆ ಅನ್ನೋ ಚರ್ಚೆಗಳು ಜೋರಾಗಿವೆ. ಇದಕ್ಕೆ ಕಾರಣವೂ ಇದೆ.
ಹಾರ್ದಿಕ್ ಪಾಂಡ್ಯ (Hardik Pandya) ಅವರ ನಾಯಕತ್ವದಲ್ಲಿ ಕಳೆದ ಮೂರು ಆವೃತ್ತಿಗಳನ್ನು ಎದುರಿಸಿದ ಮುಂಬೈ ಇಂಡಿಯನ್ಸ್ ತಂಡ ಕೇವಲ ಒಂದೇ ಒಂದು ಬಾರಿ ಪ್ಲೇ ಆಫ್ ಪ್ರವೇಶಿಸಿತ್ತು. ಅದ್ರಲ್ಲೂ 2026ರ ಐಪಿಎಲ್ನಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ಮೂರು ಆವೃತ್ತಿಗಳಲ್ಲಿ ಒಮ್ಮೆಯೂ ಟ್ರೋಫಿ ತಂದುಕೊಡುವಲ್ಲಿ ವಿಫಲವಾದ ಹಿನ್ನೆಲೆ ಪಾಂಡ್ಯ ಅವರ ನಾಯಕತ್ವಕ್ಕೆ ಕೊಕ್ ನೀಡಲು ಫ್ರಾಂಚೈಸಿ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೂ, ಹಾರ್ದಿಕ್ ಪಾಂಡ್ಯ ಅವರಿಂದ ತೆರವಾಗುವ ನಾಯಕನ ಸ್ಥಾನಕ್ಕೆ ಮೊದಲು ಬುಮ್ರಾ ಅವರನ್ನ ಕೂರಿಸುವ ಚಿಂತನೆ ಮಾಡಿತ್ತು ಫ್ರಾಂಚೈಸಿ. ಆದ್ರೆ ಬುಮ್ರಾ ಅವರು ಆಗಾಗ್ಗೆ ಗಾಯದ ಸಮಸ್ಯೆಗೆ ಒಳಗಾಗುತ್ತಿರುವ ಹಿನ್ನೆಲೆ ಮತ್ತೊಮ್ಮೆ ರೋಹಿತ್ ಶರ್ಮಾ ಅವರಿಗೇ ನಾಯಕನ ಪಟ್ಟ ನೀಡಲು ಆಡಳಿತ ಮಂಡಳಿ ಚಿಂತಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬೌಲಿಂಗ್ ಕೋಚ್ ಬದಲಿಸಿದ ಡೆಲ್ಲಿ
ಇನ್ನೂ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಕೋಚಿಂಗ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಮುಖ್ಯಕೋಚ್ ಸೌರವ್ ಗಂಗೂಲಿ ಅವರೊಂದಿಗೆ, ಸಹಾಯಕ ಕೋಚ್ ಆಗಿ ಯುವರಾಜ್ ಸಿಂಗ್ (Yuvraj Singh) ಹಾಗೂ ವೇಗದ ಬೌಲಿಂಗ್ ಕೋಚ್ ಆಗಿ ಚಾಮಿಂಡ ವಾಸ್ (Chaminda Vaas) ಅವರನ್ನ ನೇಮಕ ಮಾಡಿಕೊಂಡಿದೆ.
