ನೆಲಮಂಗಲ: ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿ ಎಂಬಿಎ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಶಿರಾ ತಾಲೂಕಿನ ಬಡಮಾರನಹಳ್ಳಿ ನಿವಾಸಿ ಶಶಿಕುಮಾರ್ (24) ಮೃತ ಯುವಕ. ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಎ (MBA) ವ್ಯಾಸಾಂಗ ಮಾಡುತ್ತಿದ್ದ. ಇದನ್ನೂ ಓದಿ:AIADMK ಗೆ ಮರ್ಮಾಘಾತ – ತಮಿಳುನಾಡು ವಿಧಾನಸಭೆಗೆ ಕರೂರು ಶಾಸಕ ವಿಜಯಭಾಸ್ಕರ್ ರಾಜೀನಾಮೆ
ಮೃತ ಶಶಿಕುಮಾರ್ ಅಶ್ವತಮ್ಮ ಹಾಗೂ ರಾಜಣ್ಣ ಅವರ ಒಬ್ಬನೇ ಮಗನಾಗಿದ್ದ. ಪೊಲೀಸ್ ಆಗಬೇಕು ಎಂದು ಕನಸು ಕಂಡಿದ್ದ. ಇಂದು ಶಿರಾದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಸದ್ಯ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಹನುಮನ ಅವತಾರ ಧರಿಸೋಕೂ ಮುನ್ನ ರಿಷಬ್ ಮನೆಯಲ್ಲಿ ʻಶ್ರೀರಾಮ ಭಜನೆʼ ಮಹಾ ಮೇಳ
