ಮಂಡ್ಯ: ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಟ್ರಕ್ ಚಾಲಕನ ಮೇಲೆ ಫೈರಿಂಗ್ ಪ್ರಕರಣದಲ್ಲಿ (Mandya Firing Case) ಪ್ರಭಾವಿ ಪುತ್ರನ ಬೆನ್ನಿಗೆ ಮಂಡ್ಯ ಪೊಲೀಸರು (Mandya Police) ನಿಂತಿದ್ದಾರಾ ಅನ್ನೋ ಅನುಮಾನ ಮೂಡಿದೆ.

ಉದ್ಯಮಿ ಪುತ್ರ ರೋಹನ್ ಗೌಡ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಉದ್ಯಮಿಯ ಮಗನನ್ನ ರಕ್ಷಿಸೋ ಸಲುವಾಗಿ ದೂರುದಾರ ನೀಡಿದ ಎಲ್ಲ ಅಂಶಗಳು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ. ಗನ್‌ನಿಂದ ಫೈರ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಬರೆಯಬೇಕಾದ ಪೊಲೀಸರು, ಯಾವುದೋ ಆಯುಧದಿಂದ ಫೈರ್ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದು, ಕೇಸ್‌ನ ವೆಟೇಜ್‌ನ್ನೇ ಇಳಿಸಲು ನೋಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: 70 ಲಕ್ಷ ಪಡೆದು ಉದ್ಯಮಿಗೆ ವಂಚನೆ, ಹಣ ವಾಪಸ್ ಕೇಳಿದ್ರೆ ರೇಪ್ ಕೇಸ್ ದಾಖಲಿಸೋದಾಗಿ ಬೆದರಿಕೆ – ಮಹಿಳೆ ಅರೆಸ್ಟ್

ಕಾರಿನಲ್ಲಿ ಸುಮಾರು 6 ರಿಂದ 7 ಮಂದಿ ಇದ್ದು, ಫೈರಿಂಗ್ ನಂತರ ಕಾರಿನಿಂದ ಪರಾರಿಯಾಗಿದ್ದಾರೆ ಅಂತ ಉಲ್ಲೇಖ ಮಾಡಲಾಗಿದೆ.
ಈ ಮಧ್ಯೆ, ಯಾವುದೇ ಅಧಿಕಾರಿಗಳು ಕಾನೂನಿಗಿಂತ ದೊಡ್ಡವರಲ್ಲ, ಯಾರು ಯಾರ ರಕ್ಷಣೆ ಮಾಡೋದಿಲ್ಲ. ಡಿಜಿ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಅಂತ ಸೂಚಿಸಿದ್ದೇನೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದನ್ನೂ ಓದಿ: ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
