ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ (B.Y Raghavendra) ಅವರ ಶಿಕಾರಿಪುರದ ನಿವಾಸಕ್ಕೆ ಶ್ರೀಲಂಕಾದ ಜಾಫ್ನಾ ಮತ್ತು ಕಿಲಿನೊಚ್ಚಿ ಜಿಲ್ಲೆಯ ಸಂಸದ ಶ್ರೀಧರನ್ ಶಿವಜ್ಞಾನಂ ಭೇಟಿ ನೀಡಿದ್ದರು.
ಸಂಸದರ ನಡುವೆ ಭಾರತ ಮತ್ತು ಶ್ರೀಲಂಕಾ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯದ ಬಗ್ಗೆ ಚರ್ಚೆ ನಡೆಯಿತು. ಉಭಯ ದೇಶಗಳ ಪ್ರಚಲಿತ ರಾಜಕೀಯ ಹಾಗೂ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಮಾತುಕತೆ ನಡೆಯಿತು. ಇದನ್ನೂ ಓದಿ: 3 ಬೂತ್‌ಗಳಲ್ಲಿ ಹೆಚ್.ಕೆ. ಪಾಟೀಲ್ ಹೆಸರು; SIR ಪಾರದರ್ಶಕವಾಗಲು ಹೇಗೆ ಸಾಧ್ಯ? – ಬೊಮ್ಮಾಯಿ ಆರೋಪ
ಈ ವೇಳೆ ಶ್ರೀಧರನ್ ಅವರನ್ನು ರಾಘವೇಂದ್ರ ಅವರು ಸನ್ಮಾನಿಸಿದರು. ಸ್ಥಳೀಯ ರಾಜಕೀಯ ನಾಯಕರು ಮುಖಂಡರು ಈ ವೇಳೆ ಇದ್ದರು. ಇದನ್ನೂ ಓದಿ: ಕಾಶ್ಮೀರದ ಶಾಲೆಗಳಲ್ಲಿ ಉಗ್ರರನ್ನು ಮಹಾತ್ಮರಂತೆ ಬಿಂಬಿಸಿದ ಪುಸ್ತಕ ಹಂಚಿಕೆ – ಇದು ಶೈಕ್ಷಣಿಕ ಜಿಹಾದ್ ಎಂದ ಬಿಜೆಪಿ
