ಇಸ್ಲಾಮಾಬಾದ್: ವಾಯುವ್ಯ ಪಾಕಿಸ್ತಾನದಲ್ಲಿ (Pakistan) ಗುರುವಾರ ರಾತ್ರಿ ಭದ್ರತಾ ಚೆಕ್‌ಪೋಸ್ಟ್‌ಗೆ ಸ್ಫೋಟಕಗಳಿಂದ ತುಂಬಿದ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸೈನಿಕರು, ಪೊಲೀಸರು ಮತ್ತು ಸರ್ಕಾರಿ ಸಿಬ್ಬಂದಿ ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ.
ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಟ್ಯಾಂಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾರತದ ಮೇಲೆ 10% ಸುಂಕ ಹೇರಿದ ಟ್ರಂಪ್
‘ಹನ್ನೆರಡು ಸೈನಿಕರು, ಇಬ್ಬರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಮಾಜಿ ಸರ್ಕಾರಿ ಅಧಿಕಾರಿ ಸೇರಿದಂತೆ ಹದಿನೈದು ಧೈರ್ಯಶಾಲಿ ಮಣ್ಣಿನ ಪುತ್ರರು ಅಂತಿಮ ತ್ಯಾಗ ಮಾಡಿ ಶಹಾದತ್ (ಹುತಾತ್ಮ) ವನ್ನು ಸ್ವೀಕರಿಸಿದ್ದಾರೆ’ ಎಂದು ಪಾಕ್ ಸೇನೆ ಪೋಸ್ಟ್ ಹಂಚಿಕೊಂಡಿದೆ.
ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲವಾದರೂ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಎಂಬ ಇಸ್ಲಾಮಿಕ್ ಉಗ್ರಗಾಮಿ ಗುಂಪು ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಉಂಟುಮಾಡುತ್ತಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ. ಇದನ್ನೂ ಓದಿ: ಬಾಂಗ್ಲಾದೇಶ ಅಧ್ಯಕ್ಷ ಶಹಾಬುದ್ದೀನ್ ರಾಜೀನಾಮೆ?
