ಮಂಡ್ಯ: ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧದ ಕೂಗಿನ ಬಳಿಕ ಇದೀಗ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವರಾಯಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿ ವಿರುದ್ಧ ಕೂಗು ಕೇಳಿ ಬರುತ್ತಿದೆ.
Advertisement
ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದ್ರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಕಿಡಿ
Advertisement
Advertisement
ಹೇಗೆ ಬಂತು ದೀವಟಿಗೆ ಸಲಾಂ?:
ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಆಸ್ಥಾನದಲ್ಲಿ ಆನೆಗಳ ಸರಣಿ ಸಾವು ಆಗುತ್ತಿತ್ತು. ಈ ವೇಳೆ ಟಿಪ್ಪು ಗುರುಗಳು ಚಲುವರಾಯಸ್ವಾಮಿಗೆ ಕೊಡುಗೆ ನೀಡುವುದಾಗಿ ತಿಳಿಸುತ್ತಾರೆ. ನಂತರ ಟಿಪ್ಪು ಚಲುವರಾಯಸ್ವಾಮಿಗೆ ಚಿನ್ನದ ಆಭರಣಗಳು ಹಾಗೂ ಪಾತ್ರೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಈ ವೇಳೆ ಇದರ ನೆನಪಾರ್ಥ ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕೆಂಬ ಸೂಚಣೆಯನ್ನು ಟಿಪ್ಪು ನೀಡಿದ್ದಾರೆ.
Advertisement
ಆ ಕಾರಣದಿಂದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಬದಲಾಯಿಸಿದೆ ಎಂದು ಹೇಳಾಗುತ್ತಿದೆ. ಇದಕ್ಕೆ ಯಾವುದೇ ಪುರಾವೆಗಳು ಇಲ್ಲ, ಕೇವಲ ಇತಿಹಾಸ ತಜ್ಞರು ಹಾಗೂ ಕೆಲವರು ಮಾತ್ರ ಹೇಳುತ್ತಿದ್ದಾರೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ