BelgaumDistrictsKarnatakaLatestMain Post

ಪ್ರೇಯಸಿ ಕತ್ತು ಹಿಸುಕಿ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಬೆಳಗಾವಿ: ಪ್ರೇಯಸಿಯ ಕತ್ತು ಹಿಸುಕಿ ಕೊಂದು ತಾನು ನೇಣುಬಿಗಿದುಕೊಂಡು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಬಸವ ಕಾಲೋನಿಯಲ್ಲಿ ನಡೆದಿದೆ.

ರಾಮಚಂದ್ರ ತೆಣಗಿ(29) ಮೃತ ಯುವಕನಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ಪ್ರೇಯಸಿ ರೇಣುಕಾ ಅವರನ್ನು ರಾಮಚಂದ್ರ ತೆಣಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ

ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದನು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್‌ ದರ್ಬಾರ್ – ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

ಬಾಡಿಗೆ ಮನೆಯೊಂದರಲ್ಲಿ ರೇಣುಕಾ ಏಕಾಂಗಿಯಾಗಿ ವಾಸವಾಗಿದ್ದರು. ತಡರಾತ್ರಿ ಮನೆಗೆ ಬಂದಿದ್ದ ರಾಮಚಂದ್ರ, ರೇಣುಕಾ ವರನ್ನು ಸ್ಕಿಪ್ಪಿಂಗ್ ಮಾಡುವ ವಯರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಅದೇ ವಯರ್ ಅನ್ನು ಫ್ಯಾನ್‍ಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೇ ಗುರುವಾರ ತಮ್ಮ ಸಂಬಂಧಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ರಾಮಚಂದ್ರ ಕಳುಹಿಸಿದ್ದ.

ಪ್ರೇಯಸಿ ಮೋಸ ಮಾಡಿದ್ದರಿಂದ ಕೊಲೆ ಮಾಡಿರುವುದಾಗಿ ರಾಮಚಂದ್ರ ಡೆತ್ ನೋಟ್ ಬರೆದಿದ್ದು, ಸದ್ಯ ಘಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Leave a Reply

Your email address will not be published.

Back to top button