ಬೆಂಗಳೂರು: ಮನುಷ್ಯ ದುಡ್ಡಿಗಾಗಿ ಮನುಷ್ಯತ್ವವನ್ನೇ ಮರೆತು ಬಿಟ್ಟಿದ್ದಾನೆ. ಜೀವ ಹೋಗ್ತಿದೆ ಅಂದ್ರೂ ಮನಸ್ಸು ಮಾತ್ರ ಕರಗಲ್ಲ. ಇದು ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ ನಡೆಯುತ್ತಿರುವ ದಂಧೆ.
ಹೌದು. ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳ ದರ್ಬಾರ್ ನಡೀತಿದ್ದು, ರೋಗಿಗಳು, ಸಂಬಂಧಿಕರು ಕಣ್ಣೀರಿಡ್ತಿದ್ದಾರೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಿಕ್ತಿಲ್ಲ
Advertisement
Advertisement
ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ರಾಜ್ಯದಲ್ಲಿ ಈಗಾಗಲೇ `ಜೀವರಕ್ಷಕ-108′ ಸೇವೆಯನ್ನು ಸದೃಢಗೊಳಿಸಿದ್ದೇವೆ ಅಂತಾ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಬಡವರಿಗೆ ಮಾತ್ರ ಈ ಯೋಜನೆಯ ಫಲ ತಲುಪುತ್ತಿಲ್ಲ ಎನ್ನುವುದು ರಹಸ್ಯ ಕಾರ್ಯಾಚರಣೆಯಲ್ಲಿ ಸಾಬೀತಾಗಿದೆ.
Advertisement
ವಿಕ್ಟೋರಿಯಾಗೆ ಸಾಮಾನ್ಯವಾಗಿ ಬೇರೆ ಆಸ್ಪತ್ರೆಯಿಂದ ಟೆಸ್ಟಿಂಗ್, ಸ್ಕ್ಯಾನಿಂಗ್‌ಗೆ ಅಂತಾ ರೋಗಿಗಳು ಬರ‍್ತಾರೆ. ಅವರನ್ನು ಆಂಬುಲೆನ್ಸ್‌ನಲ್ಲಿ ಶಿಫ್ಟ್ ಮಾಡಬೇಕಾದ್ರೇ ರೋಗಿ ಕಡೆಯವರು ಜೇಬು ತುಂಬಾ ದುಡ್ಡಿಟ್ಟುಕೊಂಡಿರಬೇಕು. ದುಡ್ಡು ಕೊಟ್ಟರೂ ಜೀವಕ್ಕೆ ಗ್ಯಾರೆಂಟಿನೇ ಇಲ್ಲ. ಯಾಕಂದ್ರೆ, ಇಲ್ಲಿ ಆಂಬುಲೆನ್ಸ್ ಡ್ರೈವರ್‌ಗಳೇ ನರ್ಸ್‌ಗಳು. ರೋಗಿಗೆ ಆಕ್ಸಿಜನ್ ಕೂಡ ಇವರೇ ಕನೆಕ್ಟ್ ಮಾಡ್ತಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೀತಿರೋ ಖಾಸಗಿ ಆಂಬುಲೆನ್ಸ್ ದಂಧೆಯನ್ನು ಹಂತ-ಹಂತವಾಗಿ ಪಬ್ಲಿಕ್ ಟಿವಿ ಬಯಲು ಮಾಡಿದೆ ನೋಡಿ. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ ಈಶ್ವರಪ್ಪ
Advertisement
ರಹಸ್ಯ ಬಯಲಾಗಿದ್ದು ಹೇಗೆ?
ಬೌರಿಂಗ್‌ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ಅಂತಾ ಆಕ್ಸಿಡೆಂಟ್ ಆದ ಯುವಕನನ್ನು ಕರೆತರಲಾಗಿತ್ತು. ಸ್ಕ್ಯಾನಿಂಗ್ ಮುಗಿದ ಬಳಿಕ ವಾಪಸ್ ಬೌರಿಂಗ್‌ಗೆ ಹೋಗೋಕೆ 1,500 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ. ಸರ್ಕಾರಿ ಆಂಬುಲೆನ್ಸ್ 108ಕ್ಕೆ ಕರೆ ಮಾಡಿದ್ರೇ ಸ್ಪಂದನೆ ಸಿಕ್ಕಿಲ್ಲ.
ಇದೇ ವೇಳೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾರಣೆ ಮೂಲಕ ಸತ್ಯಾಸತ್ಯತೆಗಳನ್ನ ಬಯಲು ಮಾಡಿದೆ. ವೇಳೆ ವಿಕ್ಟೋರಿಯಾದಿಂದ ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲು 1,500 ರೂಪಾಯಿ ಕೇಳೋ ಆಂಬುಲೆನ್ಸ್ ಡ್ರೈವರ್.. ಗಾಡಿಲಿ ನಾನೇ ನರ್ಸ್ ಇದ್ದಂತೆ.. ನಾನೇ ಆಕ್ಸಿಜನ್ ಹಾಕೋದು ಅಂತ ಹೇಳಿದ್ದಾನೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್- ಫೈನಲ್‌ಗೆ ನೀರಜ್ ಚೋಪ್ರಾ
ಇದು ರೋಗಿಗಳ ಕಡೆಯವರ ಬಳಿ ವಸೂಲಿ ದಂಧೆಯಾದರೆ ಇನ್ನೂ ಆಯಾಯ ಚಾಲಕರಿಗೆ ಒಪಿಡಿ ವಾರ್ಡ್, ಎಮರ್ಜೆನ್ಸಿ ವಾರ್ಡ್ ಅಂತಾ ಪ್ರತ್ಯೇಕವಾಗಿ ಫಿಕ್ಸ್ ಮಾಡಿಕೊಂಡಿದ್ದಾರೆ. ಒಬ್ಬರ ವಲಯದ ರೋಗಿಗಳನ್ನು ಇನ್ನೊಬ್ಬರು ಕಮ್ಮಿ ರೇಟ್‌ಗೆ ಶಿಫ್ಟ್ ಮಾಡೋ ಹಾಗಿಯೇ ಇಲ್ಲ. ಸರ್ಕಾರಿ ಆಂಬುಲೆನ್ಸ್‌ನವರು ಕರೆದೆಡೆ ಬರೋದಿಲ್ಲ. ಇದು ಪ್ರೈವೆಟ್ ಆಂಬುಲೆನ್ಸ್‌ನವರಿಗೆ ವರದಾನವಾಗಿದೆ. ಆಸ್ಪತ್ರೆಯ ಸುತ್ತಾಮುತ್ತಾ ಆಂಬುಲೆನ್ಸ್ ಡೀಲ್ ಕುದುರಿಸೋಕೆ ಅಂತಾನೆ ಡೀಲ್ ರಾಜರು ಕೂತಿರ‍್ತಾರೆ ಎನ್ನುವುದು ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ.
ರಹಸ್ಯ ಕಾರ್ಯಾಚರಣೆಯ ಸಂಭಾಷಣೆ:
ಪಬ್ಲಿಕ್ ಟಿವಿ: ಬೌರಿಂಗ್ ಆಸ್ಪತ್ರೆಗೆ … ಎಷ್ಟಣ್ಣ ಬರ್ತಿರಾ?
ಡ್ರೈವರ್: ಎಲ್ಲಿದ್ದಾರೆ ಪೇಷೆಂಟ್?
ಪಬ್ಲಿಕ್ ಟಿವಿ: ಸ್ಕ್ಯಾನಿಂಗ್‌ನಲ್ಲಿದ್ದಾರೆ.. ಎಷ್ಟು ಆಗುತ್ತೆ..?
ಡ್ರೈವರ್: 1,200 ಆಗುತ್ತೆ
ಪಬ್ಲಿಕ್ ಟಿವಿ: ಜಾಸ್ತಿ ಆಯ್ತಲ್ಲ..
ಡ್ರೈವರ್: ಏನಿಲ್ಲ ಬೇರೆ ಯಾರಿಗಾದ್ರೂ ಕೇಳಿ ಅಷ್ಟೇ 1,500..
ಪಬ್ಲಿಕ್ ಟಿವಿ: ರಾಮಯ್ಯಕ್ಕೆ ಎಷ್ಟು?
ಡ್ರೈವರ್: 1,500 ರೂ.
ಪಬ್ಲಿಕ್ ಟಿವಿ: ನರ್ಸ್ ಇದ್ದಾರಾ?
ಡ್ರೈವರ್: ಸರ್ಕಾರದ ಆಂಬುಲೆನ್ಸ್‌ನಲ್ಲಿ ಮಾತ್ರ ಇರೋದು, ಇದ್ರಲ್ಲಿ ಬರಲ್ಲ…
ಪಬ್ಲಿಕ್ ಟಿವಿ: ಆದ್ರೆ ನರ್ಸ್ ಬೇಕಲ್ಲ.
ಡ್ರೈವರ್: ನಾನೇ ಎಲ್ಲಾ ಮೇಂಟೇನ್ ಮಾಡ್ತೀನಿ …