ಬೆಂಗಳೂರು: ಸಿಲಿಕಾನ್ ಸಿಟಿಯ ಕೆಆರ್ ಮಾರ್ಕೆಟ್ನಲ್ಲಿ ಮಂಗಳವಾರ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು. ಕೆಆರ್ ಮಾರ್ಕೆಟ್ ಫ್ಲೈಓವರ್ (KR Market Flyover) ಮೇಲಿಂದ ಯುವಕನೊಬ್ಬ ಹಣ ಎಸೆಯುವ ಮೂಲಕ ಸುದ್ದಿಯಾಗಿದ್ದಾನೆ. ಯುವಕನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಹಣ (Money) ಎಸೆದಿದ್ದಾನೆ ಎಂಬುದು ತಿಳಿದುಬಂದಿಲ್ಲ.
ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಯುವಕ ಫ್ಲೈ ಓವರ್ ಮೇಲಿಂದ 10 ರೂ. ನೋಟುಗಳಿರುವ ಸುಮಾರು 3 ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ಸುಮಾರು ಮೂರು ನಾಲ್ಕು ಸಾವಿರದಷ್ಟು ಹಣ ಎಸೆದಿದ್ದಾನೆ.
ಯುವಕ ಹಣ ಎಸೆಯುತ್ತಿದ್ದಂತೆ ಜನ ಅದನ್ನು ಎತ್ತಿಕೊಳ್ಳಲು ಮುಗಿಬಿದ್ದ ಪ್ರಸಂಗ ನಡೆದಿದೆ. ಇದನ್ನೂ ಓದಿ: ಅಪಘಾತವಾಗಿ ಅರ್ಧ ಗಂಟೆಯಾದ್ರೂ ವೀಡಿಯೋ ಸೆರೆ ಹಿಡಿಯುವಲ್ಲಿ ಜನ ಬ್ಯುಸಿ- ನರಳಾಡಿ ಪ್ರಾಣಬಿಟ್ಟ ಯುವತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k