ಕೊಪ್ಪಳ: ಜನರ ಕಷ್ಟ ಆಲಿಸಲು ಕರೆದ ಸಭೆಯಲ್ಲಿ ವ್ಯಕ್ತಿಯೊಬ್ಬ ಶಾಸಕರ ಮುಂದೆ ತನ್ನ ಮನೆ ಸಮಸ್ಯೆಯನ್ನು ಸರಿಪಡಿಸುವಂತೆ ಕೇಳಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.
ಹೌದು. ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಯವರು ಸೋಮವಾರ ಕೊಪ್ಪಳದ ಯಲಬುರ್ಗಾ ತಾಲೂಕಿನ ಉಚ್ಚಲಕುಂಟಾ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಶರಣಪ್ಪ ಮೆತಗಲ್ ಎಂಬವರು ತನ್ನ ಹೆಂಡತಿ ನನ್ನ ಮಾತು ಕೇಳುತ್ತಿಲ್ಲ. ಈ ಸಮಸ್ಯೆಗೆ ನನಗೆ ಪರಿಹಾರ ಕೊಡಿ ಎಂದು ಕೇಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
Advertisement
Advertisement
ವ್ಯಕ್ತಿ ಹೇಳಿದ್ದೇನು..?: ಸರ್ ನನ್ನ ಹೆಂಡತಿ ನನ್ನ ಮಾತು ಕೇಳುತ್ತಿಲ್ಲ. ಪ್ರತಿ ದಿನವೂ ಜಗಳ ಮಾಡುತ್ತಾಳೆ. ಹೀಗಾದರೆ ನನ್ನ ಬದುಕು ಹೇಗೆ? ನೀವಾದರೂ ಬುದ್ಧಿ ಹೇಳಿ. ಈ ಮೂಲಕ ನನ್ನ ಸಮಸ್ಯೆ ಬಗೆಹರಿಸಿ ಎಂದು ರಾಯರಡ್ಡಿ ಮುಂದೆ ಶರಣಪ್ಪ ಮೆತಗಲ್ ಅಳಲು ತೋಡಿಕೊಂಡರು.
Advertisement
ಈ ಮಾತು ಕೇಳುತ್ತಿದ್ದಂತೆ ರಾಯರಡ್ಡಿ ಅಧಿಕಾರಿಗಳತ್ತ ನೋಡಿ ನಗುತ್ತಾ ವ್ಯಕ್ತಿಯನ್ನು ಸಮಾಧಾನಪಡಿಸಿದರು. ಅಲ್ಲದೆ ಸಭೆಯಲ್ಲಿದ್ದ ಗ್ರಾಮದ ಇಬ್ಬರು ಮಹಿಳೆಯರ ಬಳಿ ಗಂಡ-ಹೆಂಡತಿ ನಡುವೆ ಉಂಟಾಗಿರುವ ಜಗಳವನ್ನು ಪರಿಹಾರ ಮಾಡಿಕೊಡುವಂತೆ ಎಂದು ಶಾಸಕರು ಸೂಚಿಸಿದರು. ಇದನ್ನೂ ಓದಿ: ಗೂಡ್ಸ್ ರೈಲಿನಡಿಯಿಂದ ಹಳಿ ದಾಟಲು ಮುಂದಾಗಿ ಮಹಿಳೆ ತಲೆಗೆ ಗಂಭೀರ ಗಾಯ!
Advertisement
ಈ ಪ್ರಸಂಗಕ್ಕೆ ಸಭೆಯಲ್ಲಿದ್ದ ಜನರು ನಗೆಗಡಲಲ್ಲಿ ತೇಲಿದರು. ಬಳಿಕ ಪೋಲಿಸರು ಮಧ್ಯ ಪ್ರವೇಶ ಮಾಡಿ ಶರಣಪ್ಪನನ್ನು ಕರೆದುಕೊಂಡು ಹೋದರು.