ಬೆಂಗಳೂರು: ಜನನಿಬಿಡ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಪಾಪರೆಡ್ಡಿ ಪಾಳ್ಯ ಸರ್ಕಲ್ (Papareddy Palya Circle) ಬಳಿ ನಡೆದಿದೆ.
Advertisement
40 ವರ್ಷದ ಮಾದೇವ ಎಂಬವರು ತಡರಾತ್ರಿ 11 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸವಿಲ್ಲದೇ ಅಲೆಯುತ್ತಿದ್ದ ಮೃತ ಮಾದೇವ ಪ್ರತಿ ದಿನ ಕುಡಿದುಕೊಂಡು ಬಂದು ಹೆಂಡತಿ ಜೊತೆ ಕಿರಿಕ್ ಮಾಡುತ್ತಿದ್ದನಂತೆ. ಹಲವು ಬಾರಿ ಪತ್ನಿ ಜೊತೆ ಜಗಳ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನಂತೆ.
Advertisement
Advertisement
ಭಾನುವಾರ ಬೆಳಗ್ಗೆ ಪತ್ನಿ ಬಳಿ 150 ರೂಪಾಯಿಗಾಗಿ ಜಗಳ ತೆಗೆದಿದ್ದ ಮಾದೇವ ಚೆನ್ನಾಗಿ ಕುಡಿದಿದ್ದ. ಹೀಗಾಗಿ ಪತ್ನಿ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಳು. ಮನೆ ಬಳಿ ಬಂದ ಪೊಲೀಸರು ಮೃತ ಮಾದೇವನಿಗೆ ಬುದ್ದಿ ಹೇಳಿದ್ರಂತೆ. ನಂತರ ಮಾದೇವ ನೇರವಾಗಿ ಪಾಪರೆಡ್ಡಿ ಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ
Advertisement
ಶವವನ್ನ ನೋಡಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮೃತ ಮಾದೇವ ಚನ್ನಪಟ್ಟಣ ಮೂಲದವರಾಗಿ ಮೂರು ಮದುವೆಯಾಗಿದ್ದನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.