ಢಾಕಾ: ಬಾಂಗ್ಲಾದೇಶದ (Bangladesh) ಪಂಚಗಢ್‌ನ ಕರಟೋಯಾ ನದಿಯಲ್ಲಿ (Karatoya River) ಭಾನುವಾರ ದೋಣಿ (Boat) ಮುಳುಗಿ 24 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಹಾಲಯ ಆಚರಣೆ ಹಿನ್ನೆಲೆ ಔಲಿಯಾ ಘಾಟ್‌ನಿಂದ ಬದ್ಧೇಶ್ವರ ದೇವಸ್ಥಾನದ ಕಡೆ ಹೋಗುತ್ತಿದ್ದ ದೋಣಿ ಮುಳುಗಿದೆ. ದೋಣಿಯಲ್ಲಿ ಬೋಡಾ, ಪಂಚ್‌ಪಿರ್, ಮಾರಿಯಾ ಹಾಗೂ ಬಂಘಾರಿ ಪ್ರದೇಶದ ಹಿಂದೂ ಸಮುದಾಯದ ಜನರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಲಾಗಿತ್ತು. ದೋಣಿ ನದಿಯ ಮಧ್ಯ ಭಾಗಕ್ಕೆ ಹೋಗುತ್ತಿದ್ದಂತೆ ಅದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ. ಆದರೆ ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ
Advertisement
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪಂಚಗಢ ಜಿಲ್ಲಾಧಿಕಾರಿ ಮೊಹಮ್ಮದ್ ಜಹುರುಲ್ ಇಸ್ಲಾಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ತನಿಖೆಗೆ 5 ಸದಸ್ಯರ ತಂಡವನ್ನು ರಚಿಸಲಾಗಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಬೋಡಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸುಜೋಯ್ ಕುಮಾರ್ ರಾಯ್ ತಿಳಿಸಿದ್ದಾರೆ.
Advertisement
ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರು ರಾಜಧಾನಿ ಢಾಕಾ ಅಥವಾ ಪ್ರಮುಖ ನಗರಗಳಿಗೆ ಪ್ರಯಾಣಿಸಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ದೇಶದಲ್ಲಿ ಬಳಸಲಾಗುವ ಸುಮಾರು ಶೇ.95 ರಷ್ಟು ಮಧ್ಯಮ ಹಾಗೂ ಸಣ್ಣ ಗಾತ್ರದ ದೋಣಿಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ತೂಕ ಇಳಿಸಿ, 10 ಲಕ್ಷ ಬಹುಮಾನ ಗೆಲ್ಲಿ – ಉದ್ಯೋಗಿಗಳಿಗೆ ಫಿಟ್‌ನೆಸ್ ಚ್ಯಾಲೆಂಜ್ ಹಾಕಿದ ಸಿಇಒ