ಬಾಗಲಕೋಟೆ: ಲವ್ ಜಿಹಾದ್ ಎಂದು ಆರೋಪಿಸಿ ಪ್ರೇಮಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಹೊರವಲಯದಲ್ಲಿ ನಡೆದಿದೆ.
ಬಾಗಲಕೋಟೆಯ ತೋಟಗಾರಿಕೆ ವಿವಿ ಬಳಿ ಯುವಕ ಯುವತಿಯ ಮೇಲೆ ಹಲ್ಲೆ ಮಾಡುವ ಮೂಲಕ ಕೆಲ ಯುವಕರು ವಿಕೃತಿ ಮೆರೆದಿದ್ದಾರೆ. ನಿನಗೆ ಹಿಂದೂ ಯುವಕರು ಸಿಗಲಿಲ್ಲವಾ? ಹೀಗೆ ಮಾಡುತ್ತಾ ಹೋದರೆ ಹಿಂದೂಗಳ ಪರಿಸ್ಥಿತಿ ಏನಾಗಬೇಕು? ಎನ್ನುತ್ತಾ ಯುವತಿ ಮತ್ತು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
Advertisement
Advertisement
ನೀವು ಮಾಡೋದರಿಂದ ಹಿಂದೂಗಳೆಲ್ಲ ಹಾಳಾಗುತ್ತಿದ್ದೇವೆ. ಹಿಂದೂ ಧರ್ಮದಲ್ಲಿ ಹೇಗೆ ಇರಬೇಕೆಂದು ನಿನಗೆ ಗೊತ್ತಾಗೋದಿಲ್ವಾ ಎಂದು ಯುವತಿಗೆ ಹಲ್ಲೆ ಮಾಡಿದ್ದಾರೆ. ಯುವತಿಯು ಕಾಲಿಗೆ ಬೀಳುತ್ತೇನೆ ಎಂದು ಕೇಳಿಕೊಂಡರೂ ಕೇಳದೇ ಹಲ್ಲೆ ನಡೆಸಿದ್ದಾರೆ.
Advertisement
ನಿಮ್ಮ ತಂದೆ ತಾಯಿ ನಂಬರ್ ಕೊಡು ಎಂದು ಯುವತಿಗೆ ಬೆದರಿಕೆ ಹಾಕಿದ್ದಾರೆ. ಯುವಕ ಯುವತಿ ಬಾದಾಮಿ ತಾಲೂಕಿನ ಕೆರೂರು ಮೂಲದವರೆಂದು ತಿಳಿದುಬಂದಿದೆ.