ಹಾಸನ: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆದಿದೆ. ಹಲವು ಅಪರೂಪದ ಘಟನೆಗಳಿಗೆ ಈ ಲೋಕಸಭಾ ಚುನಾವಣೆಯು (Loksabha Elections 2024) ಸಾಕ್ಷಿಯಾಯಿತು.
- Advertisement 2
ಹೌದು. ಹಾಸನ ಜಿಲ್ಲೆಯಲ್ಲಿ ಇಂದು ಬಹಳ ವರ್ಷಗಳ ನಂತರ ಗೆಳತಿಯರಿಬ್ಬರು ಭೇಟಿಯಾಗಿದ್ದಾರೆ. ಜಾನಮ್ಮ (94), ಫಾತಿಮಾ (93) ಹತ್ತಾರು ವರ್ಷಗಳ ನಂತರ ಮುಖಾಮುಖಿಯಾಗಿದ್ದಾರೆ. ಇವರಿಬ್ಬರು ಬಾಲ್ಯದ ಗೆಳೆಯರಾಗಿದ್ದಾರೆ. ಆದರೆ ಮದುವೆಯಾದ ಬಳಿಕ ಇವರು ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ದಕ್ಷಿಣ ಕನ್ನಡ: ಬೆಳ್ತಂಗಡಿಯ ಬಾಂಜಾರು ಮಲೆಯಲ್ಲಿ 100% ಮತದಾನ
- Advertisement 3
- Advertisement 4
ಇದೀಗ ಗುಳಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದಾಗ ಕ್ಲೋಸ್ ಫ್ರೆಂಡ್ಸ್ ಜೊತೆಯಾಗಿದ್ದಾರೆ. ಮುಖಾಮಖಿಯಾದ ಕೂಡಲೇ ಸಂತಸದಿಂದ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಈ ಅಪರೂಪದ ಕ್ಷಣಕ್ಕೆ ಗುಳಗಳಲೆ ಗ್ರಾಮದ ಮತಗಟ್ಟೆ ಸಾಕ್ಷಿಯಾಯಿತು.
ಹಾಸನ ಜಿಲ್ಲೆಯಲ್ಲಿ ಸಂಜೆ 6 ಗಂಟೆಯವರೆಗೆ 72.13% ರಷ್ಟು ಮತದಾನವಾಗಿದೆ. ಹಾಸನ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹಾಗೂ ಕಾಂಗ್ರೆಸ್ ನಿಂದ ಶ್ರೇಯಸ್ ಪಟೇಲ್ ಅಖಾಡದಲ್ಲಿದ್ದಾರೆ.