ಬೆಂಗಳೂರು: ರಿಯಾಯ್ತಿ ದರದಲ್ಲಿ ದಂಡ ವಸೂಲಿಗೆ ಮುಂದಾಗಿರೋ ಸಂಚಾರಿ ಪೊಲೀಸ್ ಇಲಾಖೆ (Traffic Police) ಗೆ ಮತ್ತೊಂದು ತಲೆನೋವು ಶುರುವಾಗಿದೆ. ದಂಡ (Traffic Fine) ವಸೂಲಿ ವೇಳೆ ಈ ವಿಚಾರ ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ.
Advertisement
ಹೌದು. ಬೆಂಗಳೂರು ಸಂಚಾರಿ ಪೊಲೀಸರು ರಿಯಾಯ್ತಿ ದರದಲ್ಲಿ ವಾಹನಗಳ ದಂಡ ವಸೂಲಿ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಪ್ರತಿದಿನ ಕೋಟಿ ಕೋಟಿ ದಂಡ ಕೂಡ ಕಟ್ಟಿ ವಾಹನಗಳ ಮೇಲಿನ ಕೇಸ್ ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದಂಡದ ಸಮಯವನ್ನು ವಿಸ್ತರಿಸುವಂತೆ ಒತ್ತಾಯವೂ ಕೇಳಿ ಬರುತ್ತಿದೆ. ಈ ದಂಡ ಕಟ್ಟೋಕೆ ಬಂದ ವಾಹನ ಸಮಸ್ಯೆಗಳನ್ನು ಕೇಳಿ ಪೊಲೀಸರೇ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ
Advertisement
Advertisement
ನಕಲಿ ನಂಬರ್ ಪ್ಲೇಟ್‍ಗಳನ್ನು ಬಳಸಿಕೊಂಡು ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಎಷ್ಟೋ ಜನರು, ತಮ್ಮ ವಾಹನಗಳನ್ನು ಬಳಸದೇ ಇರೋ ದಿನಗಳಲ್ಲೂ, ಫೈನ್ ಬಿದ್ದಿವೆ. ತಮ್ಮದಲ್ಲದ ಏರಿಯಾಗಳಲ್ಲೂ ಅದೇ ಗಾಡಿಯ ನಂಬರ್ ಪ್ಲೇಟ್ ಇರುವ ವಾಹನಗಳು ನಿಯಮ ಉಲ್ಲಂಘನೆ ಮಾಡಿ ಕೇಸ್ ಬಿದ್ದಿವೆ. ವಾಹನಗಳ ದಂಡ ಕಟ್ಟೋಕೆ ಬಂದ ಜನರಿಗೆ ಈ ಫೇಕ್ ನಂಬರ್ ಪ್ಲೇಟ್ ಬಳಸಿರೋದು ನೋಡಿ ಶಾಕ್ ಆಗಿದ್ದಾರೆ.
Advertisement
ಕಳೆದ ಒಂದು ವಾರದಲ್ಲಿ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್‍ಗಳ ಕೇಸ್‍ಗಳು ಪತ್ತೆಯಾಗಿವೆ. ಕೆಲವರು ಒಂದು ಸಂಖ್ಯೆಯನ್ನು ಚೇಂಜ್ ಮಾಡಿ ವಾಹನಗಳನ್ನು ಬಳಸ್ತಿದ್ದಾರೆ. ಇನ್ನೂ ಕೆಲವರು ಸಂಪೂರ್ಣ ನಂಬರನ್ನೇ ಚೇಂಜ್ ಮಾಡಿ ಬಳಸುತ್ತಿದ್ದಾರೆ. ಹಾಗಾಗಿ ಇಂಥವರನ್ನು ಪತ್ತೆ ಮಾಡಲೇಬೇಕಾದ ಪರಿಸ್ಥಿತಿಗೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ನಕಲಿ ನಂಬರ್ ಪ್ಲೇಟ್ (Fake Number Plate) ಗಳನ್ನು ಬಳಸುವ ವಾಹನ ಸವಾರರ ಪತ್ತೆ ಮಾಡೋಕೆ ವಿವಿಧ ತಂಡವಾಗಿ ಕೆಲಸ ಮಾಡೋಕೆ ಪೊಲೀಸರು ನಿರ್ಧಾರ ಮಾಡಿದ್ದಾರೆ.
ನಕಲಿ ನಂಬರ್ ಪ್ಲೇಟ್‍ಗಳ ವಾಹನ ಸವಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ಧತೆ ಕೂಡ ನಡೆಸಲಾಗಿದೆ. ಸದ್ಯ ಫೈನ್ ಅಮೌಂಟ್ ಸಮಯ ವಿಸ್ತರಣೆ ಮತ್ತಷ್ಟು ದಿನ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಇಂದು ಈ ಬಗ್ಗೆ ಅಧಿಕೃತ ಅದೇಶ ಬರುವ ನಿರೀಕ್ಷೆ ಇದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k