ಮುಂಬೈ: ಗೂಗ್ಲಿ ಬೆಡಗಿ ಕೃತಿ ಕರಬಂದ ಬಾಲಿವುಡ್ ನಟನ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೆ ಇದೆ. ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ ಕೃತಿ, ಆತ ಇನ್ನು ಬಚ್ಚಾ ನಾನು ಈಗಲೇ ಮದ್ವೆಯಾಗಲ್ಲ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ಕೃತಿ ಇನ್‍ಸ್ಟಾ ಲೈವ್‍ನಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಾನು ಕೂಡ ಮದುವೆಗೆ ರೆಡಿಯಾಗಿಲ್ಲ. ಆತ ಇನ್ನೂ ಬಚ್ಚಾ. ಹಾಗಾಗಿ ಮದುವೆಯಾಗಲು ನಾವು ಈಗಲೇ ರೆಡಿ ಇಲ್ಲ ಎಂದರು. ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಲಾಕ್‍ಡೌನ್ ಆಗಿದ್ದು, ನಾವಿಬ್ಬರು ಒಟ್ಟಿಗೆ ಇದ್ದೇವೆ. ಈ ವೇಳೆ ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದರು.
Advertisement
Advertisement
‘ಪಾಗಲ್ ಪಂತಿ’ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಪುಲ್ಕಿತ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದರು. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ `ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು.
Advertisement
Advertisement
ಕೃತಿ ‘ಚಿರು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಆದರು. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರಿಂದ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಈಗ ಕೃತಿ ಕನ್ನಡದ ಯಾವ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ.