ಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಎಸ್.ಎಂ ಕೃಷ್ಣ ದಶಪಥ (SM Krishna Road) ಹೆದ್ದಾರಿಯಲ್ಲಿ ಸವಾರರ ಒನ್ ವೇ ಸಂಚಾರ ಪ್ರಾಣಕ್ಕೆ ಕಂಟಕವಾಗ್ತಿದೆ. ಕಡಬಗೆರೆ ಟು ಚಲ್ಲಘಟ್ಟ ಸಂಪರ್ಕಿಸುವ 11 ಕಿ.ಮೀ ಉದ್ದದ ರಸ್ತೆಯ ಎಂಟ್ರಿ-ಎಕ್ಸಿಟ್‌ಗಳಲ್ಲಿ ನಿಯಮಬಾಹಿರವಾಗಿ ಸವಾರರು ಒನ್ ವೇ ಸಂಚಾರ ಮಾಡ್ತಿದ್ದಾರೆ. ಸರ್ವೀಸ್ ರಸ್ತೆಗಳಿಗೆ ತೆರಳುವ ಭರದಲ್ಲಿ ನೇರವಾಗಿ ಹೆದ್ದಾರಿಯಲ್ಲಿ ಒನ್ ವೇನಲ್ಲಿ ಸಂಚಾರ ಮಾಡ್ತಿದ್ದಾರೆ. ಇದರಿಂದ ನಿಯಮ ಪಾಲನೆ ಮಾಡ್ತಿರೋ ಸವಾರರ ಜೀವಕ್ಕೂ ಕಂಟಕವಾಗ್ತಿದೆ. ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ | ವಿಡಿಯೋ ಕಾನ್ಫರೆನ್ಸ್‌ಗೆ ಒಪ್ಪದ ಜಡ್ಜ್ – ಶಿವಸೇನಾ ನಾಯಕನನ್ನು ಕೋರ್ಟ್‌ಗೆ ಕರೆತರಲು ಆದೇಶ
ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಗೊಂಡಿರುವ ಹೆದ್ದಾರಿಯಲ್ಲಿ ಬೈಕ್, ಕಾರು, ಲಾರಿ, ಟ್ರಕ್ ಪ್ರತಿ ವಾಹನಗಳಿಂದಲೂ ರೂಲ್ಸ್ ಬ್ರೇಕ್ ಮಾಡಿ ಸಂಚಾರ ಮಾಡ್ತಿದ್ರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ಕ್ರಮವಿಲ್ಲ. ಇದರಿಂದಲೇ ಸವಾರರು ರಾಜಾರೋಷವಾಗಿ ಒನ್ ವೇನಲ್ಲಿ ಸಂಚರಿಸುವ ಮೂಲಕ ಕುತ್ತು ತಂದುಕೊಳ್ಳುತ್ತಿದ್ದಾರೆ. `ಪಬ್ಲಿಕ್ ಟಿವಿ’ ಕ್ಯಾಮೆರಾದಲ್ಲಿ ಡೆಡ್ಲಿ ಒನ್ ವೇ ಸವಾರಿ ದೃಶ್ಯಗಳು ಸೆರೆಯಾಗಿವೆ.
