ಬೆಂಗಳೂರು: ಬಿ ಟು ಎ ಖಾತಾದಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸರ್ಕಾರ ಎ ಖಾತಾಗೆ ಅಪ್ಲೈ ಮಾಡುವ ಬಿ ಖಾತಾದಾರರಿಗೆ ಬಿಗ್ ರಿಲೀಫ್ ನೀಡಿದೆ.
ಸೈಟ್ ಸ್ಕೆಚ್ ಇಲ್ಲದಿದ್ದರೂ ಎ ಖಾತಾಗೆ ಅಪ್ಲೈ ಮಾಡಬಹುದು ಎಂದು ಎ ಖಾತಾ ಅಪ್ಲೈಗಾಗಿ ಮಹತ್ವದ ಬದಲಾವಣೆ ಮಾಡಿ ಜಿಬಿಎ (GBA) ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ
`ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ ಅವರು, ಸೈಟ್ ಸ್ಕೆಚ್ ಪಡೆಯೋಕೆ ಖಾತಾದಾರರಿಂದ ಹಣಕ್ಕೆ ಬೇಡಿಕೆ ಹಿನ್ನೆಲೆ ಖಾತಾದಾರರಿಗೆ ರಿಲೀಫ್ ನೀಡಿ ಆದೇಶ ಹೊರಡಿಸಿದೆ. ಜಿಬಿಎ ರಿಜಿಸ್ಟರ್ ಆಗಿರುವ ಆರ್ಕಿಟೆಕ್ಚರ್‌ನಿಂದಲೇ ಸ್ಕೆಚ್ ಬೇಕಿಲ್ಲ. ನಿಗದಿತ ಸ್ವರೂಪದಲ್ಲಿ ಸ್ಕೆಚ್ ಯಾವುದೇ ಇಂಜಿನಿಯರ್ ಅಥವಾ ಆರ್ಕಿಟೆಕ್ಚರ್‌ನಿಂದ ಸ್ಕೆಚ್ ಆಗಿದ್ರೆ ಸಾಕು. ಸ್ಕೆಚ್‌ನಲ್ಲಿ ಕೆಲವು ಸಮಸ್ಯೆಗಳಿದ್ದರೂ ಆಸ್ತಿ ಮತ್ತು ಅದರ ವಿವರಗಳನ್ನು ಸರಿಯಾಗಿ ಸಲ್ಲಿಸಿ ಅರ್ಜಿ ಹಾಕಬಹುದು ಎಂದಿದ್ದಾರೆ.
ಪ್ಲ್ಯಾನಿಂಗ್ ಸ್ಕೆಚ್‌ಗಾಗಿ ಯಾರಿಗೂ ಹಣ ನೀಡದೇ ಸೂಕ್ತ ದಾಖಲಾತಿ ಸಲ್ಲಿಸಿದ್ರೆ ಸಾಕು. ಬಿ ಖಾತೆಯಿಂದ ಎ ಖಾತೆ ಸಿಗಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎರಡು ಮಹಾ ದುರಂತಗಳ ನಡುವೆ ನಿಂತ ಕನ್ನಡತಿ!
