– ಆಲಮಟ್ಟಿಗೆ 10; ಲಿಂಗನಮಕ್ಕಿಗೆ 3 ಟಿಎಂಸಿ ನೀರು
– ಕೆಆರ್‌ಎಸ್, ಹಾರಂಗಿ, ಕಬಿನಿಗೆ ಹರಿದ 1 ಟಿಎಂಸಿ
ಬೆಂಗಳೂರು: ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದ ಜಲಾಶಯಗಳಿಗೆ ಸ್ವಲ್ಪಮಟ್ಟಿಗೆ ಜೀವಕಳೆ ಬಂದಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಡ್ಯಾಂಗಳೂ ಸೇರಿದಂತೆ, ರಾಜ್ಯದ 14 ಜಲಾಶಯಗಳಲ್ಲಿ ಒಟ್ಟು 895 ಟಿಎಂಸಿ ಸಂಗ್ರಹವಾಗೋ ಜಾಗದಲ್ಲಿ 277 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ಜಲಾಶಯಗಳಲ್ಲಿ 617 ಟಿಎಂಸಿ ಸಂಗ್ರಹವಾಗಿತ್ತು. ಅಂದರೆ, ಒಟ್ಟು ಸಾಮರ್ಥ್ಯದಲ್ಲಿ ಶೇ.31ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಆಲಮಟ್ಟಿಗೆ 10 ಟಿಎಂಸಿ, ಲಿಂಗನಮಕ್ಕಿಗೆ 5.5 ಟಿಎಂಸಿ, ಭದ್ರಾ ಡ್ಯಾಮ್‌ಗೆ 2 ಟಿಎಂಸಿ, ಹಾರಂಗಿ ಡ್ಯಾಮ್ 1.5 ಟಿಎಂಸಿ, ತುಂಗಭದ್ರಾ ಡ್ಯಾಮ್‌ಗೆ 2 ಟಿಎಂಸಿ, ಹೇಮಾವತಿ ಡ್ಯಾಮ್‌ಗೆ 1.32 ಟಿಎಂಸಿ, ಕೆಆರ್‌ಎಸ್ ಡ್ಯಾಮ್‌ಗೆ 1 ಟಿಎಂಸಿ ಹಾಗೂ ಕಬಿನಿ ಡ್ಯಾಮ್‌ಗೆ 1 ಟಿಎಂಸಿ ನೀರು ಹರಿದು ಬಂದಿದೆ. ಇದನ್ನೂ ಓದಿ: ದೆಹಲಿ-ಎನ್‌ಸಿಆರ್‌ನಲ್ಲಿ ಮುಂಗಾರು ಮಳೆಯ ಅಬ್ಬರ; ಜನಜೀವನ ಅಸ್ತವ್ಯಸ್ತ
ಕೃಷ್ಣಾ ನದಿ ನೀರಿನ ಒಳಹರಿವಿನಲ್ಲಿ ಏರಿಕೆ ಆಗಿದ್ದು, ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ, 50 ಕಿ.ಮೀ. ಸುತ್ತಿಬಳಸಿ ಜನ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ ಅರ್ಭಟ ಮುಂದುವರೆದಿದ್ದು, ತಲಕಾವೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಹಾಸನ ಜಿಲ್ಲೆಯ ಶಿರಾಡಿಘಾಟ್‌ನ ಹಲವು ಕಡೆ ಭೂಕುಸಿತ ಭೀತಿ ಇದ್ದು, ಸಂಭವನೀಯ ಭೂಕುಸಿತ ಸ್ಥಳಕ್ಕೆ ಎಸ್‌ಪಿ ಶುಭಾನ್ವಿತ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕರಾವಳಿ, ಹಾಸನ, ಶಿವಮೊಗ್ಗ, ಮಡಿಕೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಮುಂದಿನ 3 ದಿನಗಳ ಬಳಿಕ ಕಡಿಮೆ ಆಗುವ ನಿರೀಕ್ಷೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಇನ್ನು 10 ದಿನಗಳವರೆಗೆ ಮೋಡಕವಿದ ವಾತಾವರಣ ಇರಲಿದೆ. ಈ ಮಧ್ಯೆ, ಪ್ರತಿ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿ 1 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಡಿಕೆಶಿ ಬೆಳಗಾವಿಯಲ್ಲಿ ಹೇಳಿದ್ದಾರೆ.
ಡ್ಯಾಮ್‌ಗಳಿಗೆ ಎಷ್ಟು ನೀರು?
* ಆಲಮಟ್ಟಿ ಡ್ಯಾಮ್
24 ಗಂಟೆಯಲ್ಲಿ: 10 ಟಿಎಂಸಿ
ಗರಿಷ್ಠ ಮಟ್ಟ: 519.60 ಮೀ. (123.081 ಟಿಎಂಸಿ)
ಇಂದಿನ ಮಟ್ಟ: 513.37 ಮೀ. (50.039 ಟಿಎಂಸಿ)
ಒಳಹರಿವು: 1,31,940 ಕ್ಯೂಸೆಕ್
ಹೊರಹರಿವು: 483 ಕ್ಯೂಸೆಕ್
* ಲಿಂಗನಮಕ್ಕಿ ಡ್ಯಾಮ್
24 ಗಂಟೆಯಲ್ಲಿ: 5.5 ಟಿಎಂಸಿ
ಗರಿಷ್ಠ ಮಟ್ಟ: 1819 ಅಡಿ (151.64 ಟಿಎಂಸಿ.)
ಇಂದಿನ ಮಟ್ಟ: 1760.60 ಅಡಿ (28.58 ಟಿಎಂಸಿ)
ಒಳಹರಿವು: 36,867 ಕ್ಯೂಸೆಕ್
ಹೊರಹರಿವು: 2,566 ಕ್ಯೂಸೆಕ್
* ಭದ್ರಾ ಡ್ಯಾಮ್
24 ಗಂಟೆಯಲ್ಲಿ: 2 ಟಿಎಂಸಿ
ಗರಿಷ್ಠ ಮಟ್ಟ: 186 ಅಡಿ (71.53 ಟಿಎಂಸಿ)
ಇಂದಿನ ಮಟ್ಟ: 144.7 ಅಡಿ (30,142 ಟಿಎಂಸಿ)
ಒಳಹರಿವು: 16,304 ಕ್ಯೂಸೆಕ್
ಹೊರಹರಿವು: 216 ಕ್ಯೂಸೆಕ್
* ತುಂಗಭದ್ರಾ ಡ್ಯಾಮ್
24 ಗಂಟೆಯಲ್ಲಿ: 2 ಟಿಎಂಸಿ
ಗರಿಷ್ಠ ಮಟ್ಟ: 1633 ಅಡಿ (105.788 ಟಿಎಂಸಿ)
ಇಂದಿನ ಮಟ್ಟ: 1592.95 ಅಡಿ (13.668 ಟಿಎಂಸಿ)
ಒಳಹರಿವು: 31,456 ಕ್ಯೂಸೆಕ್
ಹೊರಹರಿವು: 177 ಕ್ಯೂಸೆಕ್
* ಹಾರಂಗಿ ಡ್ಯಾಮ್
24 ಗಂಟೆಯಲ್ಲಿ: 1.5 ಟಿಎಂಸಿ
ಗರಿಷ್ಠ ಮಟ್ಟ: 2,859 ಅಡಿ (8.5 ಟಿಎಂಸಿ)
ಇಂದಿನ ಮಟ್ಟ: 2841.55 ಅಡಿ (4.3 ಟಿಎಂಸಿ)
ಒಳಹರಿವು: 3,665 ಕ್ಯೂಸೆಕ್
ಹೊರಹರಿವು: 180 ಕ್ಯೂಸೆಕ್
* ಹೇಮಾವತಿ ಡ್ಯಾಮ್
24 ಗಂಟೆಯಲ್ಲಿ: 1.32 ಟಿಎಂಸಿ
ಗರಿಷ್ಠ ಮಟ್ಟ: 2,922.00 ಅಡಿ (37.103 ಟಿಎಂಸಿ)
ಇಂದಿನ ಮಟ್ಟ: 2900.63 ಅಡಿ (20.102 ಟಿಎಂಸಿ)
ಒಳಹರಿವು: 15,647 ಕ್ಯೂಸೆಕ್
ಹೊರಹರಿವು: 300 ಕ್ಯೂಸೆಕ್
* ಕೆಆರ್‌ಎಸ್ ಡ್ಯಾಮ್
24 ಗಂಟೆಯಲ್ಲಿ: 1 ಟಿಎಂಸಿ
ಗರಿಷ್ಠ ಮಟ್ಟ: 124.80 ಅಡಿ (49.452 ಟಿಎಂಸಿ)
ಇಂದಿನ ಮಟ್ಟ: 85.66 ಅಡಿ (13.512 ಟಿಎಂಸಿ)
ಒಳಹರಿವು: 12694 ಕ್ಯೂಸೆಕ್
ಹೊರಹರಿವು: 734 ಕ್ಯೂಸೆಕ್
* ಕಬಿನಿ ಡ್ಯಾಮ್
24 ಗಂಟೆಯಲ್ಲಿ: 1 ಟಿಎಂಸಿ
ಗರಿಷ್ಠ ಮಟ್ಟ: 2284 ಅಡಿ (19.52) ಟಿಎಂಸಿ
ಇಂದಿನ ಮಟ್ಟ: 2264 ಅಡಿ (9.16 ಟಿಎಂಸಿ)
ಒಳಹರಿವು: 14,574 ಕ್ಯೂಸೆಕ್
ಹೊರಹರಿವು: 500 ಕ್ಯೂಸೆಕ್
