ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ (Veterinary Officer Recruitment Scam) ಸಂಬಂಧಿಸಿದಂತೆ ಬಂಧಿತ ಆರೋಪಿ ಬಸವರಾಜ್ ಕನ್ನಾಳೆ ಮನೆಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ (Bengaluru) ಸಂಜಯನಗರದಲ್ಲಿರುವ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆಯನ್ನು ಸಿಐಡಿ (CID) ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಿದ್ದರು. ಅಭ್ಯರ್ಥಿಗಳು ಹಾಗೂ ಗ್ಯಾನೇಂದ್ರ ನಡುವೆ ಮಧ್ಯವರ್ತಿಯಾಗಿ ಕನ್ನಾಳೆ ಕಾರ್ಯನಿರ್ವಹಿಸಿದ್ದ. 12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗ್ಯಾನೇಂದ್ರ ಜೊತೆಗೆ ಬಸವರಾಜ್ ಸಂಪರ್ಕ ಮಾಡಿಕೊಟ್ಟಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿಯಾಗಿದ್ದಾನೆ. ಕೆಪಿಎಸ್‌ಸಿ ಪಾಸಾಗದೆ ಬಿಜೆಪಿ, ಕಾಂಗ್ರೆಸ್ ಲೀಡರ್ ಜೊತೆ ಉತ್ತಮ ಒಡನಾಟ ಬೆಳಸಿಕೊಂಡು ಮಧ್ಯವರ್ತಿ ಕೆಲಸ ಪ್ರಾರಂಭ ಮಾಡಿದ್ದಾನೆ. ರಾಜಕೀಯ ನಾಯಕರ ಜೊತೆ ಇರುವ ಫೋಟೋ ತೋರಿಸಿ ಬಸವರಾಜ್ ಕನ್ನಾಳೆ ಪರೀಕ್ಷಾರ್ಥಿಗಳನ್ನು ಖೆಡ್ಡಾಗೆ ಕೆಡುವುತ್ತಿದ್ದ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಸ್ವಂತ ಮನೆ, ಭಾಲ್ಕಿ ಪಟ್ಟಣದಲ್ಲಿ ಬೃಹತ್ ಮನೆ, ಸ್ವಗ್ರಾಮದಲ್ಲಿ ಕೋಟ್ಯಂತರ ಮೌಲ್ಯದ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪಶು ವೈದ್ಯರ ನೇಮಕಾತಿ ಹಗರಣ – ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಸಿಐಡಿ
