Connect with us

ಅರವಿಂದ್ ಪಕ್ಕ ಕುಳಿತುಕೊಳ್ಳಲ್ಲ ಎಂದ ದಿವ್ಯಾ

ಅರವಿಂದ್ ಪಕ್ಕ ಕುಳಿತುಕೊಳ್ಳಲ್ಲ ಎಂದ ದಿವ್ಯಾ

ಅರವಿಂದ್, ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯ ಮುದ್ದಾದ ಜೋಡಿ. ಎಲ್ಲರೂ ಈ ಜೋಡಿ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಅರವಿಂದ್ ನಿನಗೆ ಏನು ಕೆಲಸ ಇಲ್ಲವಾದರೆ ಇಲ್ಲಿ ಬಾ ಎಂದು ದಿವ್ಯಾಳನ್ನು ಕರೆದಿದ್ದಾರೆ. ಆ ವೇಳೆ ದಿವ್ಯಾ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ದಿವ್ಯಾ ಉರುಡುಗ, ಶುಭಾ, ಮಂಜು, ಶಮಂತ್, ರಾಜೀವ್, ವಿಶ್ವನಾಥ್ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ನಿನಗೆ ಏನೂ ಕೆಲಸ ಇಲ್ಲವಾದರೆ ಬಾ ಎಂದು ಅರವಿಂದ್ ದಿವ್ಯಾಳನ್ನು ಕರೆದಿದ್ದಾರೆ. ಈ ವೇಳೆ ಮಂಜು ಬರುತ್ತಾಳೆ… ಬರುತ್ತಾಳೆ ಹೋಗು ಕೆಲಸ ಇದ್ದರೂ, ಇಲ್ಲದೆ ಇದ್ದರೂ ಬರುತ್ತಾಳೆ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಶುಭಾ ಹೌದು ದಿವ್ಯಾ ಇವತ್ತೆ ನಮ್ಮ ಜೊತೆಗೆ ಕುಳಿತುಕೊಂಡಿರುವುದು ಎಂದು ಹೇಳಿದ್ದಾರೆ. ಆಗ ದಿವ್ಯಾ ನಗುತ್ತಾ ನಾನು ನಿಮ್ಮ ಜೊತೆಗೆ ಕುಳಿತುಕೊಳ್ಳುವುದನ್ನು ಹೇಳುವುದಿಲ್ಲ ಅರವಿಂದ್ ಪಕ್ಕ ಕುಳಿತುಕೊಳ್ಳುವುದನ್ನು ಮಾತ್ರ ಹೇಳುತ್ತಿರಾ ಎಂದು ಹೇಳಿದ್ದಾರೆ.

ಆಗ ಅಲ್ಲಿ ಇದ್ದವರು ಒಬ್ಬೊಬ್ಬರು ಒಂದೊಂದು ಮಾತನ್ನು ಹೇಳಿದ್ದಾರೆ. ಆಗ ದಿವ್ಯಾ ಹಾಗಾದರೆ ನಾನು ಇವತ್ತೊಂದು ದಿನ ಅರವಿಂದ್ ಪಕ್ಕಾ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಗ ಶುಭಾ ಇವತ್ತು ಕುಳಿತು ಸೋತರೆ ನೀನು ವಾರ ಪೂರ್ತಿಯಾಗಿ ಅರವಿಂದ್ ಪಕ್ಕಾ ಕುಳಿತುಕೊಳ್ಳುವ ಹಾಗೇ ಇಲ್ಲ ಎಂದು ಹೇಳಿದ್ದಾರೆ. ದಿವ್ಯಾ ಕೂಡಾ ಈ ಜಾಲೆಂಜ್‍ಗೆ ಒಪ್ಪಿಕೊಂಡಿದ್ದರು.

ದಿವ್ಯಾ ಅರವಿಂದ್ ಪಕ್ಕಾ ಕುಳಿತುಕೊಳ್ಳುದಿಲ್ಲ ಎಂದು ಹೇಳಿದ್ದರು. ಆದರೆ ದಿವ್ಯಾ ಮರೆತು ಅರವಿಂದ್ ಪಕ್ಕಾ ಊಟ ಮಾಡುವಾಗ ಕುಳಿತುಕೊಂಡು ಬಿಟ್ಟಿದ್ದಾರೆ. ಇದನ್ನು ನೋಡಿದ ಮನೆಂದಿ ದಿವ್ಯಾ ನೀನು ಸೋತೆ ಒಂದುವಾರ ಕುಳಿತುಕೊಳ್ಳುವ ಹಾಗೇ ಇಲ್ಲ ಎಂದು ಹೇಳಿದ್ದಾರೆ. ಆಗ ದಿವ್ಯಾ ಬೇರೆ ಬೇರೆ ಕಾರಣಗಳನ್ನು ಕೊಡಲು ಪ್ರಯತ್ನಿಸಿದ್ದಾರೆ. ಮನೆಮಂದಿ ಮಾತ್ರ ಕೇಳಿಲ್ಲಾ. ಆಗ ದಿವ್ಯಾ ಅಲ್ಲಿಂದ ಎದ್ದು ಬೇರೆ ಕಡೆ ಕುಳಿತುಕೊಂಡಿದ್ದಾರೆ.

Advertisement
Advertisement
Advertisement