ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ಗಾಯಕ ಕೆಕೆ, ಕಾರ್ಯಕ್ರಮದಲ್ಲೇ ಅಸ್ವಸ್ಥಗೊಂಡು ನಂತರ ನಿಧನ ಹೊಂದಿದ್ದಾರೆ. ಈ ಸಾವಿನ ಹೊಣೆಯನ್ನು ಪಶ್ಚಿಮ ಬಂಗಾಳ ಹೊರಬೇಕು ಮತ್ತು ಒಳ್ಳೆಯ ಗಾಯಕನನ್ನು ಬಲಿಕೊಟ್ಟ ಪಶ್ಚಿಮ ಬಂಗಾಳಕ್ಕೆ ನಾಚಿಕೆ ಆಗಬೇಕು ಎಂದು ದಿವಂಗತ ನಟ ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : 400 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ಕೆಜಿಎಫ್ 2 : ಆದರೂ, ಯಶ್ ಅಭಿಮಾನಿಗಳಿಗೆ ನಿರಾಸೆ
Advertisement
ಕೆಕೆ ಸಾವನ್ನು ನಂದಿತಾ ಪುರಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದು, ಕೆಕೆ ಕಾರ್ಯಕ್ರಮ ನೀಡಿದ್ದು ನಜ್ರುಲ್ ಮಂಚ್ ಎಂಬ ಆಡಿಟೋರಿಯಂನಲ್ಲಿ. ಎರಡುವರೆ ಸಾವಿರದಷ್ಟು ಜನರು ಮಾತ್ರ ಸೇರಬೇಕಾದ ಜಾಗದಲ್ಲಿ ಏಳು ಸಾವಿರ ಜನರು ಸೇರುವಂತೆ ಅವಕಾಶ ಕಲ್ಪಿಸಲಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಜನರು ಸೇರಿರಾದ ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ, ಆಡಿಟೋರಿಯಂನಲ್ಲಿ ಎಸಿ ಕೂಡ ಕೆಲಸ ಮಾಡುತ್ತಿರಲಿಲ್ಲವಂತೆ. ಈ ಕುರಿತು ಕೆಕೆ ದೂರಿದ್ದರು ಎಂದು ನಂದಿತಾ ಪುರಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು
Advertisement
Advertisement
ಪಶ್ಚಿಮ ಬಂಗಾಳದ ಸರಕಾರದ ವಿರುದ್ಧವೂ ಗರಂ ಆಗಿರುವ ನಂದಿತಾ ಪುರಿ, ‘ಕೆಕೆ ಸಾವಿನ ಹೊಣೆಯನ್ನು ಸರಕಾರವೇ ಹೊರಬೇಕು. ಆಡಿಟೋರಿಯಂ ಲೋಪದೋಷಗಳನ್ನು ಮುಚ್ಚಿ ಹಾಕಲು ಅಲ್ಲಿನ ಸರಕಾರ ಸಕಲ ಸರ್ಕಾರಿ ಗೌರವ ನೀಡಿದೆ’ ಎಂದಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಸೇರಿದಾಗ ಪ್ಯಾರಾಮೆಡಿಕ್ಸ್, ಪ್ರಥಮ ಚಿಕಿತ್ಸೆಯ ಸೌಲಭ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.