ಬೆಂಗಳೂರು: ಕಾಡಿನೊಳಗೆ ಸ್ವಂತ ವಾಹನದಲ್ಲಿ ಹೋಗಿ ಮೋಜು-ಮಸ್ತಿ ಮಾಡಿ ಸದ್ದು ಮಾಡಿದ್ದ ರಾಣಾ, ಈಗ ತನ್ನ ತಂದೆ ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಮೂಲಕ ಸಿಎಂಗೆ ಪ್ರಭಾವ ಬೀರಿ ಅರಣ್ಯ ಇಲಾಖೆಯಲ್ಲಿ ಹೊಸ ಹುದ್ದೆಯನ್ನು ಸೃಷ್ಟಿಸಿದ್ದಾರೆ.
ಹೌದು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ದಕ್ಷ ಅಧಿಕಾರಿಯಾಗಿದ್ದು ಜಾರ್ಜ್ ಮಗ ರಾಣಾ ಹಸ್ತಕ್ಷೇಪ ಮಾಡಿದರೆ ಸಹಿಸುತ್ತಿರಲಿಲ್ಲ. ಇದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿರುವ ರಾಣಾರನ್ನ ಕೆರಳಿಸಿದೆ. ಈಗ ಪುನತಿ ಶ್ರೀಧರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಈಗ ಪುನತಿ ಶ್ರೀಧರ್‍ಗಿಂತ ಉನ್ನತ ಶ್ರೇಣಿಯ ವನ್ಯಜೀವಿ ಪರಿಪಾಲಕ ಸೃಷ್ಟಿ ಮಾಡಿ ಅರಣ್ಯ ಇಲಾಖೆಯೊಳಗೆ ಡರ್ಟಿ ಪಾಲಿಟಿಕ್ಸ್ ನಡೆಸಿದ್ದಾರೆ.
Advertisement
ತನ್ನ ಮೋಜು ಮಸ್ತಿಗಾಗಿ ಕಾಡಿನೊಳಗೆ ಹೋಗಿ ಕುಡಿದು ಮಜಾ ಮಾಡುವುದಕ್ಕೆ ರಾಣಾ ಅರಣ್ಯ ಇಲಾಖೆಯನ್ನು ಬಲಿಕೊಡುತ್ತಿರುವುದು ಎಷ್ಟು ಸರಿ ಇನ್ನುವ ಪ್ರಶ್ನೆ ಹಿಂದೆಯೇ ಎದ್ದಿತ್ತು. ಈಗ ತನಗೆ ಬೇಕಾದವರನ್ನು ಆಯಕಟ್ಟಿನ ಸ್ಥಳಕ್ಕೆ ನೇಮಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
Advertisement
ಆರೋಪ ಮಾಡಬೇಡಿ: ನನ್ನ ಮಗ ಅರಣ್ಯ ಇಲಾಖೆಯಲ್ಲಿ ಯಾರನ್ನು ವರ್ಗಾವಣೆ ಮಾಡುವ ಇಲ್ಲವೇ ಉನ್ನತ ಹುದ್ದೆ ನೀಡುವಂತ ಸ್ಥಾನದಲ್ಲಿ ಇಲ್ಲ. ಹಾಗೇನಾದರೂ ನಿಯಮ ಮೀರಿ ಯಾರಿಗಾದರು ಉನ್ನತ ಹುದ್ದೆ ನೀಡಿದರೆ ಸಿಎಂ ಹಾಗೂ ಅರಣ್ಯ ಸಚಿವರನ್ನು ಕೇಳಿ. ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುವುದು ಬೇಡ. ನನ್ನ ಮಗನ ವಿರುದ್ಧ ದಾಖಲೆಗಳಿದ್ದರೆ ಕೊಡಿ ಎಂದು ಬೆಂಗಳೂರಿನಲ್ಲಿ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.