CinemaKarnatakaLatestMain PostSandalwood

ಬೆಂಗಳೂರಿನಲ್ಲಿ ಕೆಜಿಎಫ್ ಹೋಟೆಲ್, ಮಂಗಳೂರಿನಲ್ಲಿ ಕಾಂತಾರ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಎರಡು ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಚಾರ ಹಳೆಯದು. ಪ್ರಶಾಂತ್ ನೀಲ್ ನಿರ್ದೇಶನ ಮಾಡಿ, ಯಶ್ ನಟಿಸಿರುವ ‘ಕೆಜಿಎಫ್’ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನ ಕಂಡಿತು. ಸಾವಿರಾರು ಕೋಟಿ ಹಣವನ್ನು ಮಾಡಿತು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಚಿತ್ರ ಕೂಡ ಕೆಜಿಎಫ್ ಮಾಡಿದ ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ಎರಡೂ ಚಿತ್ರಗಳು ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಕೆಜಿಎಫ್ ಸಿನಿಮಾದಲ್ಲಿ ಬಳಕೆಯಾದ ಹಲವು ವಸ್ತುಗಳು ಹರಾಜಾದವು. ಕೆಜಿಎಫ್ ನಲ್ಲಿ ಯಶ್ ಬಳಸಿದ್ದ ಬೈಕ್ ಟ್ರೆಂಡ್ ಆಯಿತು. ಅವರ ಹೇರ್ ಸ್ಟೈಲ್ ಅನ್ನು ಕೂಡ ಹಲವರು ಕಾಪಿ ಮಾಡಿದರು. ರಿಷಬ್ ಶೆಟ್ಟಿಯ ಕಾಂತಾರ ಬಂದ ಮೇಲೂ ಕಾಂತಾರ  ಅನುಕರಣೆಯನ್ನು ಮಾಡಿದವರು ಇದ್ದಾರೆ. ಈ ಸಿನಿಮಾದ ಕೆಲವು ಡೈಲಾಗ್ ಕೂಡ ಟ್ರೋಲ್ ಆದವು. ಇದೀಗ ಈ ಎರಡೂ ಸಿನಿಮಾಗಳ ಹೆಸರಿನಲ್ಲಿ ಹೋಟೆಲ್ ಶುರುವಾಗುತ್ತಿವೆ. ಇದನ್ನೂ ಓದಿ:ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

ಈಗಾಗಲೇ ಕೆಜಿಎಫ್ ಹೆಸರಿನಲ್ಲಿ ಬೆಂಗಳೂರಿನ ಸಹಕಾರ ನಗರದ ಕೊಡಿಗೆಹಳ್ಳಿ ಗೇಟ್ ಬಳಿ ಹೋಟೆಲ್ ವೊಂದು ಶುರುವಾಗಿದೆ. ಇದರ ಬೆನ್ನಲ್ಲೆ ಮಂಗಳೂರಿನಲ್ಲೂ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಸುದ್ದಿಯಾಗಿದೆ. ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕೆಜಿಎಫ್ ನಲ್ಲಿ ಊಟ ಸವಿದವರು, ಆ ಸಿನಿಮಾವನ್ನು ನೆನಪಿಸುವಂತಹ ಸ್ಥಳಗಳಲ್ಲಿ ಕೂತು ಎಂಜಾಯ್ ಮಾಡುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button