ಚಂಡೀಗಢ: ಅಫ್ಘಾನಿಸ್ತಾನ(Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ(India) ತಂಡ ಇನ್ನಿಂಗ್ಸ್ ಹಾಗೂ 300 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಭಾರತ ತಂಡದ ಪರ ಪದಾರ್ಪಣೆ ಮಾಡಿದ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್(Manav Suthar) ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್ ಕಿತ್ತು ವಿಶೇಷ ಸಾಧನೆ ನಿರ್ಮಿಸಿದ್ದಾರೆ.
ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಫ್ಘಾನ್ ಬ್ಯಾಟರ್‌ಗಳನ್ನು ಕಾಡಿದ ಮಾನವ್ ಸುತಾರ್, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಕಬಳಿಸಿದರು. ಈ ಅಮೋಘ ಪ್ರದರ್ಶನದ ಮೂಲಕ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ 5 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಸುತಾರ್ ಪಾತ್ರರಾಗಿದ್ದಾರೆ.
ಈ ಹಿಂದೆ 1988 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣೆ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ತಲಾ 8 ವಿಕೆಟ್ (8/61 ಮತ್ತು 8/75) ಪಡೆದಿದ್ದ ನರೇಂದ್ರ ಹಿರವಾನಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ (ಮೊದಲ ಇನ್ನಿಂಗ್ಸ್‌ನಲ್ಲಿ 6 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ) ಒಟ್ಟು 7ವಿಕೆಟ್ ಪಡೆಯುವ ಮೂಲಕ ಸುತಾರ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶುಭ್‌ಮನ್ ಗಿಲ್ ಅವರ ಆಕರ್ಷಕ ಶತಕದ ಸಿಡಿಸಿ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತ್ತ ಸಾಯಿ ಸುದರ್ಶನ್ ಹಾಗೂ ರಿಷಬ್ ಪಂತ್ ತಲಾ 81 ರನ್ ಕಲೆಹಾಕಿ ತಂಡಕ್ಕೆ ನೆರವು ನೀಡಿದರು. ಬಳಿಕ ವಾಷಿಂಗ್ಟನ್ ಸುಂದರ್ ಕೂಡ 52 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 127 ಓವರ್‌ಗಳಲ್ಲಿ 564 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಘೋಷಿಸಿತ್ತು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ಅಫ್ಘಾನಿಸ್ತಾನದ ಬ್ಯಾಟಿಂಗ್ ಪಡೆ ಬಂದ ಹಾದಿಯಲ್ಲೇ ವಾಪಸ್ ಪೆವಿಲಿಯನ್ ಸೇರಿಕೊಂಡಿತು. ಭಾರತದ ಬೌಲರ್‌ಗಳ ಮಾರಕ ಬೌಲರ್‌ಗಳ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಎರಡನೇ ದಿನದಾಟದಂತ್ಯಕ್ಕೆ 39.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಕಲೆಹಾಕಿ ಆರಂಭಿಕ ಆಘಾತ ಎದುರಿಸಿತು. ಬಳಿಕ ಮೂರನೇ ದಿನದಾಟದಲ್ಲೂ ಕೂಡ ಅಫ್ಘಾನ್ ಬ್ಯಾಟರ್‌ಗಳ ವೈಫಲ್ಯ ಮುಂದುವರೆಯಿತು. ಕೇವಲ 39 ರನ್ ಗಳಿಸಿ ಉಳಿದ 5 ವಿಕೆಟ್ ಕಳೆದುಕೊಂಡು 152 ರನ್‌ಗಳಿಗೆ ಆಲೌಟ್ ಆಯಿತು.
The fifth one always hits different 🌟
A moment Manav Suthar will replay for the rest of his life 🎞️
Updates ▶️ https://t.co/Au50EfVM30#TeamIndia | #INDvAFG | @IDFCFIRSTBank pic.twitter.com/yUo8AsXHZu
— BCCI (@BCCI) June 8, 2026
ಈ ಮೂಲಕ ಭಾರತ ಎದುರಾಳಿ ತಂಡದ ವಿರುದ್ಧ 412 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ, ಅಫ್ಘಾನಿಸ್ತಾನದ ಮೇಲೆ ಫಾಲೋ-ಆನ್ ಹೇರಿತು. 412 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನದ ಬ್ಯಾಟಿಂಗ್ ಪಡೆ ಭಾರತದ ಬೌಲರ್‌ಗಳ ಮುಂದೆ ಮತ್ತೊಮ್ಮೆ ಮಂಡಿಯೂರಿ 112 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 300 ರನ್‌ಗಳ ಅಂತರದಲ್ಲಿ ಜಯ ದಾಖಲಿಸಿತು. ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿದರೆ, ಕುಲ್‌ದೀಪ್ ಯಾದವ್ 3 ವಿಕೆಟ್ ಕಿತ್ತರು. ಉಳಿದಂತೆ ಮೊಹಮ್ಮದ್ ಸಿರಾಜ್ ಹಾಗೂ ಮಾನವ್ ಸುತಾರ್ ತಲಾ ಒಂದು ವಿಕೆಟ್ ಉರುಳಿಸಿದರು. ಕೊನೆಗೆ ಶರಫುದ್ದೀನ್ ಅಶ್ರಫ್ ರಿಟೈರ್ಡ್ ಹರ್ಟ್ ಘೋಷಿಸಿದರು. ಇದನ್ನೂ ಓದಿ: ಒಂದೇ ದಿನ 15 ವಿಕೆಟ್ ಪತನ – ಅಫ್ಘಾನ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್, 300 ರನ್‌ಗಳ ಭರ್ಜರಿ ಜಯ
ಭಾರತ ಡಿಕ್ಲೇರ್ ಘೋಷಿಸಿದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನವನ್ನು 113 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಮಾನವ್ ಸುತಾರ್ ನಿರ್ಣಾಯಕ ಪಾತ್ರ ವಹಿಸಿದರು. ಬಳಿಕ ಮೂರನೇ ದಿನ ಕೂಡ ಅವರು 3 ವಿಕೆಟ್ ಕಬಳಿಸಿ ಪ್ರವಾಸಿ ತಂಡವನ್ನ ಆಲೌಟ್ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಮೂರನೇ ದಿನವೂ ಕೂಡ ತನ್ನ ಬೌಲಿಂಗ್ ಪ್ರಾಬಲ್ಯ ಮುಂದುವರೆಸಿದ ಸುತಾರ್ 3 ವಿಕೆಟ್ ಕಿತ್ತು ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದರು.
MANAV SUTHAR HAS FOUR ON DEBUT! 🤯🔥
A sharp review from Team India confirms the edge as #ManavSuthar picks up his fourth wicket on Test debut, bringing an end to Ashraf’s gritty resistance 👏🇮🇳#INDvAFG | Only Test ➡️ DAY 3 | LIVE NOW 👉 https://t.co/jzjg5vVQq5 pic.twitter.com/5Bk1M0cs11
— Star Sports (@StarSportsIndia) June 8, 2026
ಏನಿದು ಫಾಲೋ ಆನ್?
ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ತಂಡ 200 ರನ್ ಹಿನ್ನಡೆಯೊಂದಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ಕೊನೆಗೊಂಡರೆ ಎದುರಾಳಿ ತಂಡಗಳು ಫಾಲೋ ಆನ್ ಹೇರಬಹುದು. ಆಗ ಫಾಲೋ ಆನ್ ಪಡೆದ ತಂಡ, ಮೊದಲ ಇನ್ನಿಂಗ್ಸ್ ಅಂತ್ಯಗೊಂಡ ಬೆನ್ನಲ್ಲೇ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಬೇಕು. 2ನೇ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ರನ್‌ಗಳನ್ನು ನ್ನು ಪೂರ್ಣಗೊಳಿಸಿ ಅದರ ನಂತರ ಎಷ್ಟು ರನ್ ಕಲೆಹಾಕುತ್ತದೊ ಅದನ್ನು ಟಾರ್ಗೆಟ್ ಆಗಿ ಪರಿಗಣಿಸಲಾಗುತ್ತದೆ.
