Bengaluru CityCinemaDistrictsKarnatakaLatestMain Post

ಕೆಜಿಎಫ್ ನಟನ ಐಷಾರಾಮಿ ಕಾರು ಅಪಘಾತ

Advertisements

ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಅವಿನಾಶ್ ಅವರ ಕಾರು ಬೆಂಗಳೂರಿನಲ್ಲಿ ಅಪಘಾತಕ್ಕೊಳಗಾಗಿದೆ.

ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ಆ್ಯಂಡ್ರೂಸ್ ಪಾತ್ರದಲ್ಲಿ ಅಭಿನಯಿಸಿದ್ದ ಬಿಎಸ್ ಅವಿನಾಶ್ ಅವರು ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಗೂಡ್ಸ್ ಲಾರಿಯೊಂದು ಕಾರಿಗೆ ಡಿಕಕಿ ಹೊಡೆದಿದ್ದು, ಅವಿನಾಶ್ ಅವರ ಬೆಂಕ್ ಕಾರು ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

ಅದೃಷ್ಟವಶಾತ್ ಘಟನೆಯಲ್ಲಿ ಅವಿನಾಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಕ್ಯಾಂಟರ್ ಚಾಲಕ ಶಿವಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ

ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಅಲ್ಲದೇ ಸಿನಿಮಾದಲ್ಲಿ ಸಖತ್ ಹೈಲೆಟ್ ಆಗಿ ಕಾಣಿಸಿಕೊಂಡಿದ್ದ ಅವಿನಾಶ್ ಅವರ ಪಾತ್ರ ಜನರ ಗಮನವನ್ನು ಬೇಗ ಸೆಳೆದಿತ್ತು. ಕೆಜಿಎಫ್ ಸಿನಿಮಾ ರೆಕಾರ್ಡ್ ಮಾಡುವುದರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿದ್ದ ಎಲ್ಲಾ ಕಲಾವಿದರಿಗೂ ಹೆಸರು ತಂದು ಕೊಟ್ಟಿತ್ತು.

Live Tv

Leave a Reply

Your email address will not be published.

Back to top button