– ಎಲ್‌ಡಿಎಫ್ – ಯುಡಿಎಫ್ ನಡುವೆ ಹಣಾಹಣಿ.. ಯಾರಿಗೆ ಸಿಹಿ?
ಸತತ 2ನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ಕೇರಳ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದ ಸಿಎಂ ಪಿಣರಾಯಿ ವಿಜಯನ್ ಈ ಬಾರಿ ಹ್ಯಾಟ್ರಿಕ್ ಮ್ಯಾಜಿಕ್ ಮಾಡಲು ಸನ್ನದ್ಧವಾಗಿದ್ದಾರೆ. ಆದರೆ ಹೆಚ್ಚಿರುವ ಬಿಜೆಪಿ ಮತ ಪ್ರಮಾಣದಿಂದಾಗಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ತೆಕ್ಕೆಗೆ ಕೇರಳ ವಾಲಬಹುದು ಎನ್ನಲಾಗುತ್ತಿದೆ.
ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕೆಸಿ ವೇಣುಗೋಪಾಲ್ ಸಿಎಂ ಆಗ್ತಾರೆ ಎನ್ನಲಾಗಿದೆ. ಬಿಜೆಪಿ ಕೂಡ ಒಮ್ಮೆ ಖಾತೆ ತೆರೆಯೋಣ ಅಂತ ನಿಂತಿದೆ. ಆದರೆ, ಬಹುತೇಕ ಎಕ್ಸಿಟ್ ಪೋಲ್‌ಗಳಲ್ಲಿ ಅತಂತ್ರ ಫಲಿತಾಂಶ ಬರಬಹುದು ಅಂತಲೂ ಹೇಳಿವೆ. ಕೇರಳದಲ್ಲಿ ಈ ಬಾರಿ ಧರ್ಮ-ಜಾತಿ ಲೆಕ್ಕಾಚಾರವೂ ಜೋರಾಗಿದೆ.
140 ಸದಸ್ಯರ ಬಲ ಹೊಂದಿರುವ ಕೇರಳಂ ವಿಧಾನಸಭೆಯ ಅಧಿಕಾರದ ಗದ್ದುಗೆ ಹಿಡಿಯಲು 71 ಬಹುಮತ ಪಡೆಯುವ ಅಗತ್ಯವಿದೆ.

ಎಕ್ಸಿಟ್ ಪೋಲ್ ಸಮೀಕ್ಷೆಗಳು ಏನ್ ಹೇಳಿವೆ?
* ಟುಡೇಸ್ ಚಾಣಕ್ಯ: ಯುಡಿಎಫ್-69, ಎಲ್‌ಡಿಎಫ್- 64, ಬಿಜೆಪಿ- 7
* ಎಕ್ಸಿಸ್ ಮೈ ಇಂಡಿಯಾ : ಎಲ್‌ಡಿಎಫ್ 49-62.. ಯುಡಿಎಫ್ 78-90.. ಬಿಜೆಪಿ 0-3.. ಇತರೆ 00
* ಟೈಮ್ಸ್ ನೌ: ಎಲ್‌ಡಿಎಫ್ 52-61.. ಯುಡಿಎಫ್ 72-84.. ಬಿಜೆಪಿ 3-7.. ಇತರೆ 00
* ಮ್ಯಾಟ್ರಿಜ್: ಎಲ್‌ಡಿಎಫ್ : 60-65.. ಯುಡಿಎಫ್ :70-75.. ಬಿಜೆಪಿ : 3-5.. ಇತರೆ : 2-4
* ಪಿ-ಮಾರ್ಕ್: ಎಲ್‌ಡಿಎಫ್ : 62-69.. ಯುಡಿಎಫ್ : 71-79.. ಬಿಜೆಪಿ : 1-4.. ಇತರೆ : 0-3
ಈ ಚುನಾವಣೆಯಲ್ಲಿ ಯುಡಿಎಫ್ ಗೆಲುವು ನಿರೀಕ್ಷಿತ, ಆದರೆ ಕೇರಳದಲ್ಲಿ ಬಿಜೆಪಿ ಈ ಬಾರಿ ಶೇ. 20 ರಷ್ಟು ಮತಗಳನ್ನು ಪಡೆಯುವ ಮೂಲಕ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಮುನ್ಸೂಚನೆ ನೀಡಿದೆ. ನಾಯರ್ ಮತ್ತು ಈಳವ ಸಮುದಾಯಗಳಲ್ಲಿ ಬಿಜೆಪಿ ಮಾಡುತ್ತಿರುವ ಮೋಡಿಯಿಂದಾಗಿ ಎಲ್‌ಡಿಎಫ್ ಮತಬ್ಯಾಂಕ್‌ಗೆ ಪೆಟ್ಟು ಬೀಳುವ ಲಕ್ಷಣಗಳಿವೆ. ಅಲ್ಪಸಂಖ್ಯಾತರ ಮತಗಳು ಗಣನೀಯವಾಗಿ ಯುಡಿಎಫ್ ಕಡೆ ವಾಲಿರುವುದರಿಂದ ಅವರು ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
* ಕೇರಳದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ಪಕ್ಕಾನಾ..?
> ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಸಾಧ್ಯತೆ
> ಕಾಂಗ್ರೆಸ್ 70ರಿಂದ 75ರಷ್ಟು ಸ್ಥಾನ ಬಗ್ಗೆ ಸಮೀಕ್ಷೆ ಭವಿಷ್ಯ
> ಕೆಲವು ಸಮೀಕ್ಷೆಗಳಲ್ಲಿ ಅತಂತ್ರ ಫಲಿತಾಂಶ
> ಎಲ್‌ಡಿಎಫ್-ಯುಡಿಎಫ್ ಮಧ್ಯೆ ತೀವ್ರ ಪೈಪೋಟಿ ಸಾಧ್ಯತೆ
> ಒಂದು ವೇಳೆ ಅತಂತ್ರವಾಗಿ ಬಿಜೆಪಿ 5-7 ಸ್ಥಾನ ಗೆದ್ದರೆ ಯಾರಿಗೆ ಬೆಂಬಲ…?
> ಮತ್ತೆ ಕಾಂಗ್ರೆಸ್- ಎಡಪಕ್ಷಗಳು ಒಂದಾಗುತ್ತಾ…?
ಅನ್ನೋ ರಾಜಕೀಯ ಗಣಿತವೂ ನಡೆಯುತ್ತಿದೆ. ಇನ್ನು ಕೇರಳಂ ನಲ್ಲಿ ಈ ಬಾರಿ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ. ಜಾತಿ ಲೆಕ್ಕಾಚಾರ ವರ್ಕ್ ಆಗಿಬಹುದಾ ಅಂತ ನೋಡೋದಾದರೆ..
ಕೇರಳದಲ್ಲಿ ಹೇಗಿದೆ ಜಾತಿ ಲೆಕ್ಕಾಚಾರ..?
* ಕೇರಳಂನಲ್ಲಿ ದಾಖಲೆ ಮತದಾನದಿಂದ ಜನ ಬೆಂಬಲದ ಮುನ್ಸೂಚನೆ
* ಕಾಸರಗೋಡು ಭಾಗದಲ್ಲಿ ಅತಿಹೆಚ್ಚು ಮತದಾನ ನಡೆದಿದೆ
* ಮಧ್ಯ ಮತ್ತು ದಕ್ಷಿಣ ಕೇರಳಂನಲ್ಲಿ ಮತದಾನ ಸಂಖ್ಯೆ ಇಳಿಕೆ
* ಶೇ.39 ರಷ್ಟು ನಾಯರ್ ಸಮುದಾಯ ಬಿಜೆಪಿಗೆ ಬೆಂಬಲ
* ಯುಡಿಎಫ್‌ಗೆ ಶೇ.32 & ಎಲ್‌ಡಿಎಫ್‌ಗೆ ಶೇ.28 ರಷ್ಟು ಬೆಂಬಲ
* ಬರೋಬ್ಬರಿ ಶೇ.62 ರಷ್ಟು ಮುಸ್ಲಿಮರು ಯುಡಿಎಫ್‌ಗೆ ಒಲವು
* ಶೇ.33 ರಷ್ಟು ಮುಸ್ಲಿಮರು ಎಲ್‌ಡಿಎಫ್ & ಶೇ.4 ರಷ್ಟು ಬಿಜೆಪಿಗೆ ಬೆಂಬಲ
* ಎಲ್‌ಡಿಎಫ್ ಬೆನ್ನಿಗೆ ನಿಂತಿರುವ ಪರಿಶಿಷ್ಟ ಜಾತಿಯ ಮತದಾರರು
ಒಟ್ಟಾರೆ.. ಕೇರಳಂನಲ್ಲಿ ಶೇ.78 ರಷ್ಟು ಮತದಾನವಾಗಿದ್ದು ಯಾರು ಗೆದ್ದು ಬೀಗಲಿದ್ದಾರೆ ಅನ್ನೋ ಸ್ಪಷ್ಟ ಚಿತ್ರಣ ಇಂದು ಮಧ್ಯಾಹ್ನದ ವೇಳೆಗೆ ಸಿಗಲಿದೆ.












