Connect with us

Bollywood

ಲಾಕ್‍ಡೌನ್‍ ಟೈಮ್‍ಪಾಸ್ – ಪಾತ್ರೆ ತೊಳೆದಾಯ್ತು ಈಗ ಪೊರಕೆ ಹಿಡಿದು ಕತ್ರಿನಾ ಬ್ಯಾಟಿಂಗ್

Published

on

ಮುಂಬೈ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇತ್ತ ಸೆಲ್ಫ್ ಐಸೋಲೇಶನ್ ಆಗಿರುವ ಸೆಲೆಬ್ರಿಟಿಸ್‍ಗಳು ಮನೆಯಲ್ಲಿ ಹೇಗೆಲ್ಲಾ ಟೈಮ್ ಪಾಸ್ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆಯೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಮನೆಯಲ್ಲಿ ತಾವು ಹೇಗೆ ಸಮಯ ಕಳೆಯುತ್ತಿದ್ದಾರೆ ಎನ್ನೊದನ್ನ ವಿಡಿಯೋ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್ ಇತ್ತೀಚೆಗಷ್ಟೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲೂ ನೀರನ್ನು ಕಡಿಮೆ ಬಳಸಿ ಹೇಗೆ ಪಾತ್ರೆ ತೊಳೆಯುವುದು ಎಂದು ಅಭಿಮಾನಿಗಳಿಗೆ ಟಿಪ್ಸ್ ಕೊಟ್ಟಿದ್ದರು. ಆ ವಿಡಿಯೋ ಸಖತ್ ವೈರಲ್ ಆದ ಬೆನ್ನಲ್ಲೇ ಕತ್ರಿನಾ ಇನ್ನೊಂದು ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ.

ಕತ್ರಿನಾ ಕಸಗುಡಿಸುತ್ತಾ ಪೊರಕೆಯಲ್ಲಿ ಕ್ರಿಕೆಟ್ ಆಡಿದ ವಿಡಿಯೋ ಸಖತ್ ವೈರಸ್ ಆಗುತ್ತಿದ್ದು, ಅಭಿಮಾನಿಗಳ ಮನಗೆದ್ದಿದೆ. ಕತ್ರಿನಾಗೆ ಹೀಗೆ ಪೊರಕೆ ಹಿಡಿದು ಕಸ ಹೊಡೆಯುತ್ತಿರೋದು ಹೊಸತೇನಲ್ಲ. ಈ ಹಿಂದೆ ಸೂರ್ಯವಂಶಿ ಸಿನಿಮಾ ಶೂಟಿಂಗ್ ವೇಳೆ ಕತ್ರಿನಾ ಪೊರಕೆ ಹಿಡಿದು ಕಸ ಹೊಡೆಯುತ್ತಾ, ಅಕ್ಷಯ್ ಕುಮಾರ್ ರನ್ನು ಅಟ್ಟಾಡಿಸಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಈಗ ಕತ್ರಿನಾ ಪೊರಕೆಯನ್ನೇ ಬ್ಯಾಟ್ ಮಾಡಿಕೊಂಡು ಕ್ರಿಕೆಟ್ ಆಡುತ್ತಾ, ಅವರ ತಂಗಿ ಕಮೆಂಟ್ರಿ ಕೊಟ್ಟ ವಿಡಿಯೋ ಅಭಿಮಾನಿಗಳ ಮನ ಕದ್ದಿದೆ.

ಕ್ವಾರೆಂಟೈನ್ ಸಮಯವನ್ನು ತಂಗಿ ಇಸಬೆಲ್ಲಾ ಕೈಫ್ ಜೊತೆ ಕಳೆಯುತ್ತಿರುವ ಕತ್ರಿನಾ ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಮಂದಿ ಕತ್ರಿನಾ ವಿಡಿಯೋಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಈ ಹಿಂದೆ ಕತ್ರಿನಾ ಪಾತ್ರೆ ತೊಳೆಯುವ ವಿಡಿಯೋ ಹಂಚಿಕೊಂಡಿದ್ದಾಗ ನಟ ಅರ್ಜುನ್ ಕಪೂರ್ ಕಮೆಂಟ್ ಮಾಡಿ ‘ನಮ್ಮ ಮನೆಗೆ ನಿಮಗೆ ಆಹ್ವಾನಿಸುತ್ತಿದ್ದೇನೆ, ಕಾಂತಾಬಾಯಿ 2.0’ ಎಂದು ಬರೆದು ಕತ್ರಿನಾ ಅವರ ಕಾಲೆಳೆದಿದ್ದರು.

Click to comment

Leave a Reply

Your email address will not be published. Required fields are marked *