ಲಕ್ನೋ: ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಬ್ ವಿವಾದ ಈಗ ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲೂ ಪ್ರತಿಧ್ವನಿಸಿದೆ.
ಅಲಿಗಢ ಧರ್ಮ ಸಮಾಜ ಕಾಲೇಜು ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದೆ. ಕಾಲೇಜು ನಿಗದಿ ಪಡಿಸಿದ ಸಮವಸ್ತ್ರವನ್ನೇ ಎಲ್ಲ ವಿದ್ಯಾರ್ಥಿಗಳು ಧರಿಸಬೇಕು ಎಂದು ಹೇಳಿದೆ.
Advertisement
ಹಿಜಬ್ ಅಥವಾ ಕೇಸರಿ ವಸ್ತ್ರವನ್ನು ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದು ಧರ್ಮ ಸಮಾಜ ಕಾಲೇಜು ಆಡಳಿತ ಮಂಡಳಿ ಗುರುವಾರ ನೋಟಿಸ್ ಬೋರ್ಡ್ನಲ್ಲಿ ಸೂಚನೆಯನ್ನು ಪ್ರಕಟಿಸಿದೆ.
Advertisement
Advertisement
ಕಳೆದ ವಾರ ಉಡುಪಿ ಕಾಲೇಜಿನ ವಿದ್ಯಾರ್ಥಿಗಳನ್ನು ಬೆಂಬಲಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಹಿಜಾಬ್ ದಬ್ಬಾಳಿಕೆಯ ಸಂಕೇತವಲ್ಲ, ಅದು ಸ್ವಾತಂತ್ರ್ಯದ ಸಂಕೇತವಾಗಿದೆ. ನಿಮ್ಮ ಮೊಬೈಲ್ ಅನ್ನು ಸುರಕ್ಷಿತವಾಗಿರಿಸಲು ನೀವು ಅದನ್ನು ಮುಚ್ಚುತ್ತೀರಿ. ಅಂತೆಯೇ, ನಾವು ಸುರಕ್ಷತೆಗಾಗಿ ಹಿಜಾಬ್‌ನಿಂದ ನಮ್ಮನ್ನು ಮುಚ್ಚಿಕೊಳ್ಳುತ್ತೇವೆ ಎಂದು ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದ್ದರು. ಇದನ್ನೂ ಓದಿ: ಕೋರ್ಟ್ ಹೊರಗಡೆ ಹಿಜಬ್ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ
Advertisement
ಪ್ರತಿಭಟನೆಯ ನಡೆದ ಬೆನ್ನಲ್ಲೇ ಸೋಮವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಆಗಮಿಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಪ್ರಕಟಿಸಬೇಕೆಂದು ಮನವಿ ಮಾಡಿದ್ದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ಸಮಯದಲ್ಲೇ ಈ ವಿಚಾರ ಪ್ರತಿಧ್ವನಿಸಿದೆ. ಫೆ.10 ರಂದು ನಡೆದ ಮೊದಲ ಹಂತದ ಸಮಯದಲ್ಲೇ ಅಲಿಗಢದಲ್ಲಿ ಚುನಾವಣೆ ನಡೆದಿದೆ. ಇದನ್ನೂ ಓದಿ: ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!