– ಮನೆ ಮನೆಗಳಿಗೂ ಭೇಟಿ ನೀಡಿ ಪರಿಷ್ಕರಣೆಗೆ ಸಿದ್ಧತೆ
ಬೆಂಗಳೂರು: ಡಿ.ಕೆ. ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾದ ಮೇಲೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವೇಗ ಪಡೆದುಕೊಂಡಿದೆ. ಮೊದಲಿಗೆ ಗೃಹಲಕ್ಷ್ಮಿ (Gruhalakshmi), ಗೃಹಜ್ಯೋತಿ (Gruha Jyothi) ಯೋಜನೆಗಳಲ್ಲಿ ಕಠಿಣ ಹಂತಗಳಲ್ಲಿ ಪರಿಷ್ಕರಣೆ ಆಗಲಿದೆ.
ಇಂದು ನಡೆದ ಕ್ಯಾಬಿನೆಟ್‌ನಲ್ಲೂ (Cabinet Meeting) ಕೂಡ ಅನೌಪಚಾರಿಕವಾಗಿ ಮುಖ್ಯಮಂತ್ರಿಗಳೇ ವಿಷಯ ಪ್ರಸ್ತಾಪಿಸಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಕೆಲವು ಶಿಫಾರಸ್ಸು ಮಾಡಿದ್ದಾರೆ. ಏನ್ ಮಾಡಬಹುದು ಅಂತ ವರ್ಕೌಟ್ ಮಾಡುತ್ತಿದ್ದೇವೆ. ಮುಂದೆ ಅದನ್ನು ಚರ್ಚೆ ಮಾಡೋಣ ಎಂದಿದ್ದಾರೆ.
ಪಬ್ಲಿಕ್‌ಟಿವಿಗೆ ಸಿಕ್ಕಿರುವ ಮೂಲಗಳು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಶೇ.100ರಷ್ಟು ಆಗುವುದು ಪಕ್ಕಾ ಎಂದು ತಿಳಿಸಿದೆ. ಹೀಗಾಗಿ ಇ-ಗೌರ್ನೆನ್ಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಇಂಧನ ಇಲಾಖೆಯಿಂದ ಮರು ಪರಿಶೀಲನೆ ನಡೆಯಲಿದೆ. ಇದನ್ನೂ ಓದಿ: ಶೀಘ್ರದಲ್ಲೇ ಸಾರಿಗೆ ಬಸ್ ಟಿಕೆಟ್ ದುಬಾರಿ?
ಏನು ದಾಖಲಾತಿ ಇರಬೇಕು?
1. ಆಧಾರ್ ಕಾರ್ಡ್
2. ವೋಟರ್ ಐಡಿ
3. ಅಕೌಂಟ್ ನಂಬರ್‌ಗೆ ಆಧಾರ್ ಲಿಂಕ್ ಆಗಬೇಕು
4. ಮನೆಯ ಯಜಮಾನಿ ಆಧಾರ್ ಕಾರ್ಡ್
5. ಮನೆ ಯಜಮಾನಿಯ ಪತಿಯ ಆಧಾರ್ ಕಾರ್ಡ್
6. ಇ-ಕೆವೈಸಿ ಆಗಿರುವ ಮೊಬೈಲ್ ನಂಬರ್
ಎಲ್ಲೆಲ್ಲಿ ಪರಿಶೀಲನೆ?
ರಾಜ್ಯದ 17 ಇ-ಸೇವಾಕೇಂದ್ರಗಳು
ಪೋಸ್ಟ್ ಆಫೀಸ್
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಪಂಚಾಯಿತಿ
2ನೇ ಹಂತದಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ
