ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಿರ್ದೇಶಕ ರಾಜ್ ನಿಡಿಮೋರು (raj Nidimoru) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸಿನಿ ವಲಯದಲ್ಲಿ ಸಿನಿವಲಯದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ʼಮಾ ಇಂಟಿ ಬಂಗಾರಂʼ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯ ವೇಳೆ ಸಮಂತಾ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸಮಂತಾ ಅವರ ಬೇಬಿ ಬಂಪ್ ಗಮನಿಸಿದ ಅಭಿಮಾನಿಗಳು ಗರ್ಭಧಾರಣೆ ಕುರಿತು ಊಹಾಪೋಹಗಳನ್ನು ಆರಂಭಿಸಿದ್ದರು.
ಈಗ ಸಮಂತಾ ಮತ್ತು ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸಮಂತಾ ಮತ್ತು ರಾಜ್ ನಿಧಿಮೋರು 2025ರ ಡಿಸೆಂಬರ್ 1ರಂದು ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಸರಳವಾಗಿ ವಿವಾಹವಾಗಿದ್ದರು. ಮದುವೆಯ ಕೆಲ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇಬ್ಬರೂ ಈ ಹಿಂದೆ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಬಳಿಕ ಅವರ ಸ್ನೇಹ ಮತ್ತು ಆತ್ಮೀಯತೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.
ವಿಶ್ವ ಪಿಕಲ್‌ಬಾಲ್ ಲೀಗ್ ವೇಳೆ ಸಮಂತಾ ಹಂಚಿಕೊಂಡಿದ್ದ ಕೆಲವು ಫೋಟೋಗಳಲ್ಲಿ ರಾಜ್ ನಿಡಿಮೋರು ಜೊತೆ ಕಾಣಿಸಿಕೊಂಡ ನಂತರ ಇಬ್ಬರ ಸಂಬಂಧದ ಬಗ್ಗೆ ಚರ್ಚೆಗಳು ಹೆಚ್ಚಾಗಿದ್ದವು.
ಮದುವೆಯ ಬಳಿಕವೂ ಇವರ ಕುರಿತ ಸುದ್ದಿಗಳು ಆಗಾಗ ಕೇಳಿಬರುತ್ತಿದ್ದವು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತಂದಿದೆ.ಇದನ್ನೂ ಓದಿ: ತನಿಷಾ ಕುಪ್ಪಂಡ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ
Samantha pregnant agita pola 🥵 Adai raj yenga sammuva potu pregnant akitie da 🔥#samantha #samantharuthprabhu pic.twitter.com/V1Pe8Snf6M
— Billa_2 (@2_billa33825) June 20, 2026
ಇತ್ತೀಚೆಗೆ ಬಿಡುಗಡೆಯಾದ ಮಾ ಇಂಟಿ ಬಂಗಾರಂ ಚಿತ್ರದಲ್ಲೂ ಸಮಂತಾ ಮತ್ತು ರಾಜ್ ನಿಡಿಮೋರು ಮತ್ತೊಮ್ಮೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕಿನಲ್ಲೂ ಹೊಸ ಅಧ್ಯಾಯ ಆರಂಭಿಸುತ್ತಿರುವ ಈ ಜೋಡಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.ಇದನ್ನೂ ಓದಿ: ದ್ರೌಪದಿ ಮುರ್ಮು ಜೀವನ ಕಥೆ ತೆರೆಗೆ; ನಿರ್ಮಾಣದ ಹೊಣೆ ಹೊತ್ತ ಅಮೀರ್ ಖಾನ್
