CinemaDistrictsKarnatakaLatestMain PostSandalwood

‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

Advertisements

ಜೋಗಿ ಖ್ಯಾತಿಯ ಪ್ರೇಮ್ ಮತ್ತು ಹೆಬ್ಬಲಿ ಚಿತ್ರ ಖ್ಯಾತಿಯ ಕೃಷ್ಣ ಹೊಸ ಸಿನಿಮಾ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ಧ್ರುವ ಸರ್ಜಾಗಾಗಿ ಸಿನಿಮಾ ಮಾಡುತ್ತಿದ್ದರೆ, ಕೃಷ್ಣ ಅವರು ಅಭಿಷೇಕ್ ಅಂಬರೀಶ್ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಇಬ್ಬರೂ ನಿರ್ದೇಶಕರು ತಮ್ಮ ಚಿತ್ರಕ್ಕೆ ಒಂದೇ ಟೈಟಲ್ ಅಂದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟಿಸಲಿರುವ ಹೊಸ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದಿದೆ. ಕೃಷ್ಣ ಅವರ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ. ಈ ಎರಡೂ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ, ಈ ಕಾಳಿ ಟೈಟಲ್ ಅಂತಿಮವಾಗಿ ಯಾರಿಗೆ ಸಿಗಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

ಈಗಾಗಲೇ ತಮ್ಮ ಚಿತ್ರಕ್ಕೆ ಕಾಳಿ ಎಂದು ಟೈಟಲ್ ಇಟ್ಟಿರುವುದಾಗಿ ಆಪ್ತರ ಬಳಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ. ಆದರೆ, ಅವರು ಅಧಿಕೃತವಾಗಿಯೂ ಈ ವಿಷಯವನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ. ಮತ್ತು ಘೋಷಣೆ ಕೂಡ ಮಾಡಿಲ್ಲ. ಹಾಗಾಗಿ ಪ್ರೇಮ್ ಅವರಿಗೆ ಈ ಟೈಟಲ್ ಸಿಗಬಹುದಾ ಎನ್ನುವ ಪ್ರಶ್ನೆಗೂ ಸ್ಪಷ್ಟ ಉತ್ತರವಿಲ್ಲ. ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ್ರು ಕಿಯಾರಾ- ಸಿದ್ಧಾರ್ಥ್ ಮಲ್ಹೋತ್ರಾ

ಮೂಲಗಳ ಪ್ರಕಾರ ಈಗಾಗಲೇ ಕೃಷ್ಣ ಅವರ ಬಳಿಯೇ ಕಾಳಿ ಟೈಟಲ್ ಇದೆಯಂತೆ. ಪ್ರೇಮ್ ತಂಡವು ಈ ಟೈಟಲ್ ಅನ್ನು ಕೊಡುವಂತೆ ಮನವಿ ಮಾಡಿದರೂ, ಅದು ಸಾಧ್ಯವಾಗಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಮೊದಲ ಬಾರಿಗೆ ಪ್ರೇಮ್ ಅವರಿಗೆ ತಾವು ಅಂದುಕೊಂಡ ಟೈಟಲ್ ಸಿಕ್ಕಿಲ್ಲ ಎನ್ನುವ ನೋವು ಇದೆಯಂತೆ. ಕೃಷ್ಣ ಅವರು ಬರೆದ ಕಥೆಗೆ ಬೇರೆ ಟೈಟಲ್ ಹೊಂದುತ್ತಿದ್ದರೆ, ಬದಲಾಯಿಸಬಹುದು ಎನ್ನುವ ನಿರೀಕ್ಷೆ ಪ್ರೇಮ್ ಅವರದ್ದು. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

ಈ ಇಬ್ಬರೂ ನಿರ್ದೇಶಕರು ಕಾಳಿ ಟೈಟಲ್ ಕುರಿತಾಗಿ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಟೈಟಲ್ ಕೂಡ ಅನೌನ್ಸ್ ಮಾಡಿಲ್ಲ. ಹಾಗಾಗಿ ಕಾಳಿ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲವಂತೂ ಗಾಂಧಿನಗರದಲ್ಲಿ ಮೂಡಿದೆ. ಇಬ್ಬರೂ ಕೂತು ಯೋಚಿಸಿ, ಯಾರ ಚಿತ್ರಕ್ಕೆ ಕಾಳಿ ಟೈಟಲ್ ಹೊಂದಿಕೆ ಆಗುತ್ತದೆ ಎನ್ನುವ ತೀರ್ಮಾನಕ್ಕೆ ಬರಬಹುದು.

Leave a Reply

Your email address will not be published.

Back to top button