ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಮತ್ತು ಸಿದ್ಧಾರ್ಥ್ ಬೇರೆಯಾಗಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುನಿಸು ಮರೆತು ಮತ್ತೆ ಈ ಜೋಡಿ ಒಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಕಿಯಾರಾ ಸಿನಿಮಾ ರಿಲೀಸ್‌ಗೆ ಬಂದು ಚಿತ್ರ ನೋಡಿ ಚಿತ್ರತಂಡಕ್ಕೆ ಸಿದ್ಧಾರ್ಥ್ ಸಾಥ್ ನೀಡಿದ್ದಾರೆ.
Advertisement
ಶೇರ್‌ಷಾ ಜೋಡಿ ಮತ್ತೆ ಒಂದಾಗಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಆರ್ಯನ್ ನಟನೆಯ `ಭೂಲ್ ಭುಲಯ್ಯ’ ಚಿತ್ರದ ಶೋಗೆ ಸಿದ್ಧಾರ್ಥ್ ಮಲ್ಹೋತ್ರಾ ಬಂದು ಚಿತ್ರ ನೋಡಿ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ.
Advertisement
Advertisement
`ಭೂಲ್ ಭುಲಯ್ಯ’ ಚಿತ್ರದ ಶೋ ಬರುವಂತೆ ಕಿಯಾರಾ ಸಿದ್ಧಾರ್ಥ್ ಅವರನ್ನು ಕರೆಯಲಾಗಿತ್ತು. ಕಿಯಾರಾ ಮನವಿಯಂತೆ ಚಿತ್ರ ನೋಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಸಿದ್ಧಾರ್ಥ್ , ಕಿಯಾರಾ ಅವರನ್ನು ತಬ್ಬಿ ಚಿತ್ರದ ಕುರಿತು ಪ್ರಶಂಸಿದ್ದಾರೆ. ಈ ಮೂಲಕ ನಮ್ಮ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದನ್ನು ಈ ಜೋಡಿ ತೋರಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ `ಕಿಸ್’ ಬ್ಯೂಟಿ ಶ್ರೀಲೀಲಾ
Advertisement
ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಡ್ತಿರೋದು ಜೊತೆಗೆ ಕಿಯಾರಾ ಚಿತ್ರದ ಸಕ್ಸಸ್ ಖುಷಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಬಾಗಿಯಾಗಿರೋದನ್ನ ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.