ಉಡುಪಿ: ಸೋಮವಾರ ಶಬರಿಮಲೆ ಪಂದಳ ಕಂದನ ಸನ್ನಿಧಾನದಲ್ಲಿ ವಿಜ್ರಂಭಣೆಯ ಆಚರಣೆ ನಡೆಯಿತು. ಇದೇ ಸಂದರ್ಭ ಉಡುಪಿಯಲ್ಲಿ ದೀಪಪ್ರಜ್ವಲನಾ ಅಭಿಯಾನ ನಡೆಯಿತು.
ಸಂಜೆ ಆರು ನಲವತ್ತೈದರ ಸುಮಾರಿಗೆ ಜ್ಯೋತಿಯ ದರ್ಶನವೂ ಆಯ್ತು. ಅದೇ ಸಮಯಕ್ಕೆ ಸರಿಯಾಗಿ ದೇಶಾದ್ಯಂತ ಅಯ್ಯಪ್ಪ ಭಕ್ತರು ತಮ್ಮ ದೇವಸ್ಥಾನದ ಆವರಣದಲ್ಲಿ , ಪ್ರಮುಖ ರಸ್ತೆಗಳಲ್ಲಿ ಕೋಟಿ ದೀಪ ಹಚ್ಚಲು ನಿರ್ಧರಿಸಿದ್ದರು. ಈ ಮೂಲಕ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ಖಂಡಿಸಲು ಅಯ್ಯಪ್ಪ ಭಕ್ತರು ನಿರ್ಧರಿಸಿದ್ದರು.
Advertisement
Advertisement
ಪಂದಳ ರಾಜನ ಈ ಆದೇಶದಂತೆ ಉಡುಪಿಯಲ್ಲೂ ಕೂಡ ಪ್ರಮುಖ ರಸ್ತೆಗಳಲ್ಲಿ ಜ್ವಾಲೆ ಪ್ರಜ್ವಲನ ಅಭಿಯಾನ ನಡೆಯಿತು. ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಆವರಣದಲ್ಲಿ ನೂರಾರು ಮಂದಿ ಅಯ್ಯಪ್ಪ ಭಕ್ತರು ಪಾಲ್ಗೊಂಡಿದ್ದರು. ಅಭಿಯಾನದಲ್ಲಿ ಮಹಿಳೆಯರು, ಯುವತಿಯರು ಜ್ವಾಲೆ ಪ್ರಜ್ವಲಿಸಿದರು.
Advertisement
ಈ ಮೂಲಕ ಅಯ್ಯಪ್ಪ ದೇವಸ್ಥಾನದ ವಿಚಾರದಲ್ಲಿ ನಡೆಯುತ್ತಿರುವ ಸರ್ಕಾರ ಕೋರ್ಟ್ ಮತ್ತು ಭಕ್ತರ ತಿಕ್ಕಾಟ ಶೀಘ್ರ ಅಂತ್ಯವಾಗಲಿ ಎಂದು ಪ್ರಾರ್ಥಿಸಲಾಯಿತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv