Connect with us

Bollywood

ನೇಣು ಬಿಗಿದ ಸ್ಥಿತಿಯಲ್ಲಿ ಜಗ್ಗಾ ಜಾಸೂಸ್ ನಟಿ ಬಿದಿಶಾ ಬೆಜ್ಜುರುವಾ ಶವ ಪತ್ತೆ

Published

on

ಗುರ್‍ಗಾಂವ್: ನಗರದ ಪೊಶ್ ಸುಶಾಂತ್ ಬಡವಾಣೆಯ ಮನೆಯೊಂದರಲ್ಲಿ ಬಾಲಿವುಡ್‍ನ ಉದಯನ್ಮೋಕ ನಟಿ ಬಿದಿಶಾ ಬೆಜ್ಜುರವಾ ಶವ ಪತ್ತೆಯಾಗಿದೆ.

ಮೂಲತಃ ಅಸ್ಸಾಂ ರಾಜ್ಯದ ಬಿದಿಶಾ ಬಾಲಿವುಡ್‍ನಲ್ಲಿ ಸಹ ನಟಿಯಾಗಿ ನಟಿಸುತ್ತಿದ್ದರು ಮತ್ತು ಅಸ್ಸಾಮಿ ಭಾಷೆಯ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ರು. ಸೋಮವಾರ ಬೆಳಗ್ಗೆ ಬಿದಿಶಾ ವಾಸವಿದ್ದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಬಿದಿಶಾರ ತಂದೆಯ ದೂರಿನನ್ವಯ ಬಿದಿಶಾರ ಪತಿ ನಿಶೀತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆಯೇ ಬಿದಿಶಾ ಮುಂಬೈನಿಂದ ಗುರಗಾಂವ್ ಬಂದಿದ್ದರು. ಇನ್ನು ಇತ್ತೀಚಿಗಷ್ಟೇ ಬಿದಿಶಾ ಬಾಡಿಗೆ ಮನೆ ಮಾಡಿ ಪತಿಯೊಂದಿಗೆ ವಾಸವಾಗಿದ್ದರು.

ಬಿದಿಶಾ ತಂದೆ ಆಕೆಗೆ ಕರೆ ಮಾಡಿದಾಗ ಮಗಳು ಕಾಲ್ ರಿಸೀವ್ ಮಾಡಿರಲಿಲ್ಲ. ಇದ್ರಿಂದ ಅನುಮಾನಗೊಂಡ ತಂದೆ ಪೊಲೀಸರಿಗೆ ಕರೆಮಾಡಿ ಮಗಳ ಲೋಕಲ್ ವಿಳಾಸ ತಿಳಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ನಟಿಯ ಶವ ಮನೆಯ ಸೀಲಿಂಗ್ ಫ್ಯಾನ್‍ನಲ್ಲಿ ನೇತಾಡುತ್ತಿತ್ತು ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಸಹರನ್ ತಿಳಿಸಿದ್ದಾರೆ.

ಬಿದಿಶಾ ಮತ್ತು ನಿಶೀತ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಯ ನಂತರ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಅನುಮಾನಗೊಂಡ ನಟಿಯ ತಂದೆ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ನಟಿಯ ಫೇಸ್‍ಬುಕ್, ಕಾಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ದೀಪಕ್ ಸಹರನ್ ಹೇಳಿದ್ದಾರೆ.

ಬಿದಿಶಾ ಇತ್ತೀಚಿಗೆ ತೆರೆಕಂಡ ರಣ್‍ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಅಭಿನಯದ `ಜಗ್ಗಾ ಜಾಸೂಸ್’ ಸಿನಿಮಾದಲ್ಲಿ ನಟಿಸಿದ್ದರು. ಹಾಗೆಯೇ ಬಿದಿಶಾ ಗಾಯಕಿಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ರು.