ಮೈಸೂರು: ಅರಮನೆ ನಗರಿಯಲ್ಲಿ ದಸರಾ (Mysuru Dasara 2022) ಸಂಭ್ರಮ ಕಳೆಗಟ್ಟಿದೆ. ಈ ಮಧ್ಯೆ ಸಾಕಷ್ಟು ಗಮನಸೆಳೆಯುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಚರ್ಚೆ ಕೂಡ ಆಗುತ್ತಿದೆ.
Advertisement
ಹೌದು. ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ (Pramoda Devi) ಯ ಮುಂದೆ ಮಂಡಿಯೂರಿ (Bow) ಇನ್ಫೋಸಿಸ್ (Infosys) ಅಧ್ಯಕ್ಷೆ ಸುಧಾಮೂರ್ತಿ (Sudhamurthy) ನಮಸ್ಕರಿಸಿದ್ದಾರೆ. ಈ ಫೋಟೋ (Viral Photo) ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಸುಧಾಮೂರ್ತಿಯ ಸರಳತೆಗೆ ಜನ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
Advertisement
Homework sheet for my kid! Schools should be little careful with such undemocratic teachings (might seem small mistake).. they might inculcate wrong values in minds of kids. pic.twitter.com/L2Q73s7WsX
— Guruprasad D N (@guruve_dn) September 25, 2022
ಚರ್ಚೆ ಆರಂಭವಾಗಿದ್ದು ಹೇಗೆ..?: ಮಗುವಿನ ಮನೆಕೆಲಸಕ್ಕಾಗಿ ವರ್ಕ್‍ಶೀಟ್ ಅನ್ನು ತೋರಿಸುವ ಟ್ವಿಟ್ಟರ್ ಪೋಸ್ಟ್ ನೊಂದಿಗೆ ಇದು ಪ್ರಾರಂಭವಾಯಿತು. “ನಾನು ____ ರಾಜನಿಗೆ,” ಬಿಟ್ಟ ಸ್ಥಳ ತುಂಬುವಂತೆ ಒಂದು ವಾಕ್ಯವನ್ನು ನೀಡಲಾಗಿದ್ದು, ಅದಕ್ಕೆ ‘ತಲೆಬಾಗು’ ಎಂಬ ಆಯ್ಕೆ ನೀಡಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ
Advertisement
I have great respect for Mrs Sudha Murthy. Her books inspired many women to look up and move on. Her prostration to the royal is an emotional expression and she is more royal than the Mysore royal family.
— Santhanam Srinivasan (@santhraj5) September 27, 2022
Advertisement
ಮಗುವಿನ ಹೋಂ ವರ್ಕ್ (Home Work) ನಿಂದ ಕಳವಳಗೊಂಡ ತಂದೆ, ನನ್ನ ಮಗುವಿಗೆ ಈ ರೀತಿಯ ಹೋಂ ವರ್ಕ್ ಗಳನ್ನು ಕೊಡಬೇಡಿ. ಇಂತಹ ಪ್ರಜಾಸತ್ತಾತ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗರೂಕರಾಗಿರಬೇಕು. ಅವು ಮಕ್ಕಳ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯಗಳನ್ನು ತುಂಬಬಹುದು ಎಂದು ಆಕ್ರೋಶ ಹೊರಹಾಕಿ ಗುರುಪ್ರಸಾದ್ ಡಿ.ಎನ್ ಎಂಬವರು ಟ್ವೀಟ್ ಮಾಡಿದ್ದರು.
— S Shyam Prasad (@ShyamSPrasad) September 25, 2022
ಈ ಟ್ವೀಟ್ (Tweet) ಗೆ ಮತ್ತೊಬ್ಬ ಬಳಕೆದಾರ, ಮೈಸೂರು ರಾಜಮನೆತನದ ಸದಸ್ಯರ ಮುಂದೆ ಸುಧಾ ಮೂರ್ತಿಯವರು ಪ್ರಮೋದಾ ದೇವಿಗೆ ನಮಸ್ಕರಿಸುತ್ತಿರುವ ಫೋಟೋ ರಿಟ್ವೀಟ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ. ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ರಾಜಪ್ರಭುತ್ವ ಅಂತ್ಯಗೊಂಡ ದಶಕಗಳ ನಂತರ ರಾಜಮನೆತನದ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜಮನೆತನದವರು ಇನ್ನೂ ಸಾಮಾನ್ಯ ಜನರ ಗೌರವಕ್ಕೆ ಅರ್ಹರೇ ಎಂಬ ಅಭಿಪ್ರಾಯದಲ್ಲಿ ಈ ಚರ್ಚೆ ನಡೆದಿದೆ.
That's our culture. Keyboard Leli journalists won't understand. Irrespective of age, stature, position everyone bows to Rajamatha. Her culture has taught her this.
— Varun (@Varunm96) September 26, 2022
ಹಲವರು ಸುಧಾಮೂರ್ತಿಯವರ ನಡತೆಯನ್ನು ಸಮರ್ಥಿಸಿಕೊಂಡರು. ಫೋಟೋ ನೋಡಿದ ಒಬ್ಬರು, ಅವರು ರೋಲ್ ಮಾಡೆಲ್ (Role Model) ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಅದು ನಮ್ಮ ಸಂಸ್ಕೃತಿ. ವಯಸ್ಸು, ಅಂತಸ್ತು, ಸ್ಥಾನಮಾನಗಳ ಭೇದವಿಲ್ಲದೆ ಎಲ್ಲರೂ ರಾಜಮನೆತನವನ್ನು ಗೌರವಿಸುತ್ತಾರೆ. ಅವಳ ಸಂಸ್ಕೃತಿ ಅವಳಿಗೆ ಇದನ್ನು ಕಲಿಸಿದೆ. ಮತ್ತೊಬ್ಬರು, ಗುಲಾಮಗಿರಿಯು ಆಳವಾಗಿ ಬೇರೂರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಹಳೆಯ ಮೈಸೂರು ರಾಜ್ಯದ ಜನರು ಯಾವಾಗಲೂ ರಾಜಮನೆತನದ ಬಗ್ಗೆ ಅಪಾರ ಗೌರವವನ್ನು ಹೊಂದಿರುತ್ತಾರೆ. ರಾಣಿಗೆ ನಮಸ್ಕರಿಸುವುದು ಸಾಮಾನ್ಯ ವಿಚಾರವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ ಹಲವಾರು ಚರ್ಚೆಗಳು ನಡೆದಿವೆ. ಸದ್ಯ ಚರ್ಚೆ ಗೀಡಾದ ಫೋಟೋ ಹಳೆಯ ಫೋಟೋವೆಂದು ಹೇಳಲಾಗುತ್ತಿದೆ.