ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತದ ಮೊದಲ ಇನ್ನಿಂಗ್ಸನ್ನು 600 ರನ್ ಗೆ ನಿಲ್ಲಿಸಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ದಿನದಾಟ ಅಂತ್ಯಗೊಂಡಾಗ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಆಂಜೆಲೋ ಮ್ಯಾಥ್ಯೂಸ್ 54 ಹಾಗೂ ದಿಲ್ ರುವಾನ್ ಪಿರೇರಾ 6 ರನ್ ಗಳಿಸಿ ಅಜೇಯಾರಿ ಉಳಿದಿದ್ದಾರೆ.
ಮೊದಲ ದಿನದಾಟ ಕೊನೆಯಾಗುವಾಗ ಭಾರತ ನಿನ್ನೆ 3 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತ್ತು. ಇಂದು ಮತ್ತೆ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ 133.1 ಓವರ್ ನಲ್ಲಿ 600 ರನ್ ಗೆ ಆಲೌಟ್ ಆಯಿತು.
Advertisement
ಯಾರು ಎಷ್ಟು ರನ್? ಟೀಂ ಇಂಡಿಯಾ ಪರವಾಗಿ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಶತಕ ಬಾರಿಸಿದರು. ಶಿಖರ್ ಧವನ್ 168 ಎಸೆತಗಳಲ್ಲಿ 31 ಬೌಂಡರಿಗಳ ನೆರವಿನಿಂದ 190 ರನ್ ಗಳಿಸಿದರೆ, ಪೂಜಾರ 265 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 153 ರನ್ ಗಳಿಸಿದರು. ಅಜಿಂಕ್ಯಾ ರಹಾನೆ 57, ಹಾರ್ದಿಕ್ ಪಾಂಡ್ಯಾ 50 ರನ್ ಗಳಿಸಿದರು. ಪಾಂಡ್ಯಾ 49 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅರ್ಧ ಶತಕ ದಾಖಲಿಸಿದರು.
Advertisement
ಅಭಿನವ್ ಮುಕುಂದ್ 12, ಕೊಹ್ಲಿ 3, ಅಶ್ವಿನ್ 47, ವೃದ್ಧಿಮಾನ್ ಸಾಹ 16, ರವೀಂದ್ರ ಜಡೇಜಾ 15, ಮೊಹಮ್ಮದ್ ಶಮಿ 30, ಉಮೇಶ್ ಯಾದವ್ 11 ರನ್ ಗಳಿಸಿದರು. ಶಮಿ 30 ರನ್ ಗಳಲ್ಲಿ 3 ಸಿಕ್ಸರ್ ಕೂಡಾ ಸೇರಿತ್ತು.
Advertisement
ಶ್ರೀಲಂಕಾ ಪರವಾಗಿ ನುವಾನ್ ಪ್ರದೀಪ್ 6 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಲಹಿರು ಕುಮಾರ 3 ಹಾಗೂ ಹೀರತ್ 1 ವಿಕೆಟ್ ಗಳಿಸಿದರು.
Advertisement
ಭಾರತದ 600 ರನ್ ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಉಮೇಶ್ ಯಾದವ್ ಆಘಾತ ನೀಡಿದರು. ದಿಮುತ್ ಕರುಣರತ್ನೆ 2 ರನ್ ಗಳಿಸಿ ಔಟಾದರು. ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಗುಣತಿಲಕ ಹಾಗೂ ಆರಂಭಿಕ ಆಟಗಾರ ಉಪುಲ್ ತರಂಗ ಉತ್ತಮ ಆಟವಾಡಿದರು. 15 ನೇ ಓವರ್ ನಲ್ಲಿ ಮತ್ತೆ ಬೌಲಿಂಗ್ ಗೆ ಇಳಿದ ಮೊಹಮ್ಮದ್ ಶಮಿ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿದರು. ಉತ್ತಮವಾಗಿ ಆಟವಾಡುತ್ತಿದ್ದ ಉಪುಲ್ ತರಂಗ 64 ರನ್ ಗಳಿಸಿ ರನೌಟ್ ಆದರು.
ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ 2, ಉಮೇಶ್ ಯಾದವ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಗಳಿಸಿದರು.
Stumps on Day 1, India post 399/3 (90.0 Ovs) Pujara 144*, Rahane 39*, Pradeep 3/64. #SLvIND pic.twitter.com/pK4sxJUCm5
— Sri Lanka Cricket ???????? (@OfficialSLC) July 26, 2017
https://twitter.com/OfficialSLC/status/890180271567282176
https://twitter.com/OfficialSLC/status/890489078960898048
Lunch on Day 2, India on 503/7 (117 overs) Jadeja 8*, Pandya 4*, Nuwan Pradeep claims his first five -wicket haul in Tests. #SLvIND pic.twitter.com/YBHzU2ERQK
— Sri Lanka Cricket ???????? (@OfficialSLC) July 27, 2017
Pujara, Rahane fall early on Day 2, India 436/5 (103 overs) Ashwin 10*, Saha 0* #SLvIND pic.twitter.com/DHxek2WfXw
— Sri Lanka Cricket ???????? (@OfficialSLC) July 27, 2017
Nuwan Pradeep claims his fouth Wicket, Pujara caught behind for 153. IND 423/4 (97.4 Ovs) #SLvIND pic.twitter.com/asNWrMltjO
— Sri Lanka Cricket ???????? (@OfficialSLC) July 27, 2017
PHOTOS: Opening Ceremony of the India tour of Sri Lanka! #UltimateShowDown @SLvIND pic.twitter.com/dzrNEUJjOy
— Sri Lanka Cricket ???????? (@OfficialSLC) July 26, 2017
Day 2, Tea: Sri Lanka 38/1 (7 ovs) trail by 562 runs. Tharanga 24*, Gunathilaka 12* #SLvIND pic.twitter.com/6OjwoEMkhE
— Sri Lanka Cricket ???????? (@OfficialSLC) July 27, 2017