ನವದೆಹಲಿ: ಎಸಿ ಸರ್ವಿಸ್ ಸೆಂಟರ್‌ನಲ್ಲಿ (AC Service Centre) ಭಾರೀ ಬೆಂಕಿ ಅವಘಡ ಸಂಭವಿಸಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ದೆಹಲಿಯ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.
ಶುಕ್ರವಾರ ಮುಂಜಾನೆ ಇಲ್ಲಿನ ಪಟೇಲ್ ನಗರ ಪ್ರದೇಶದಲ್ಲಿ ಘಟನೆ ನಡೆದಿದೆ. 80 ವರ್ಷದ ತ್ರಿಲೋಕಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಟ್ಟಡದ ತುಂಬೆಲ್ಲ ಬೆಂಕಿ ಹಬ್ಬಿದೆ. ಕಟ್ಟಡದಲ್ಲಿದ್ದ ವಾಹನಗಳು ಸೇರಿದಂತೆ ಅನೇಕ ವಸ್ತುಗಳು ಅಗ್ನಿಗಾಹುತಿಯಾಗಿವೆ. ಇದನ್ನೂ ಓದಿ: ವಿಜಯ್ ವಿರುದ್ಧ ಕುದುರೆ ವ್ಯಾಪಾರ ಆರೋಪ – ಶಾಸಕ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೋ ಬಿಡುಗಡೆ ಮಾಡಿದ ಟಿವಿಕೆ
ಬೆಳಗಿನ ಜಾವ 3:05 ರ ಸುಮಾರಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಬರುವ ಹೊತ್ತಿಗೆ ಮೂರು ಅಂತಸ್ತಿನ ಕಟ್ಟಡಕ್ಕೆ ಸಂಪೂರ್ಣವಾಗಿ ಬೆಂಕಿಯಲ್ಲಿ ಹೊತ್ತಿಕೊಂಡಿತ್ತು. ಗ್ಯಾಸ್ ಸಿಲಿಂಡರ್‌ಗಳು ಮತ್ತು ಎಸಿ ಕಂಪ್ರೆಸರ್‌ಗಳು ನಿರಂತರವಾಗಿ ಸ್ಫೋಟಗೊಳ್ಳುತ್ತಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರಿಗೆ ಕಷ್ಟವಾಯಿತು.
ಕೊನೆಗೆ ಬೆಂಕಿ ನಂದಿಸಲು ಹಲವು ನೀರಿನ ಮಾರ್ಗಗಳನ್ನು ಬಳಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆಯಲ್ಲಿ 10 ಕಾರು ಮತ್ತು 10 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಜಾಕ್ ಭಯದಿಂದ ತಮಿಳುನಾಡಿನ `ಕೈ’ ಶಾಸಕರು ಬೆಂಗಳೂರಿಗೆ ಶಿಫ್ಟ್ ವದಂತಿ – ಡಿಕೆಶಿ ಹೇಳಿದ್ದೇನು?

