ಚೆನ್ನೈ: ನಟ ವಿಜಯ್ (Vijay) ಮೇಲೆ ಕುದುರೆ ವ್ಯಾಪಾರ ಆರೋಪಿಸಿ ಎಎಂಎಂಕೆ (AMMK) ಮುಖ್ಯಸ್ಥ ಟಿಟಿವಿ ದಿನಕರನ್ (TTV Dhinakaran) ದೂರು ನೀಡಿದ ಬೆನ್ನಲ್ಲೇ ಟಿವಿಕೆ ಪಕ್ಷ, ಶಾಸಕ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೋ ಬಿಡುಗಡೆ ಮಾಡಿದೆ.
ತಮಿಳುನಾಡಿಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಈ ಮಧ್ಯೆ ವಿಜಯ್ ನೇತೃತ್ವದ ಪಕ್ಷವು ತಮಿಳುನಾಡಿನಲ್ಲಿ ಸರ್ಕಾರ ರಚನೆಯಲ್ಲಿ ಎಎಂಎಂಕೆ ಬೆಂಬಲದ ನಕಲಿ ಪತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದನ್ನೂ ಓದಿ: ಲಿವ್ ಇನ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ – ಇತ್ತ ಪತಿ, ಎರಡು ಮಕ್ಕಳ ಬಿಟ್ಟು ಜೊತೆಗಿದ್ದವ್ಳು ಎಸ್ಕೇಪ್
#WATCH | TVK shares a video of AMMK MLA Kamaraj, saying “These are the video visuals of AMMK MLA Kamaraj voluntarily and happily writing a letter expressing his support for the Tamilaga Vettri Kazhagam. He had stated that he was extending support to the Tamilaga Vettri Kazhagam… pic.twitter.com/sM3xtyXx12
— ANI (@ANI) May 8, 2026
ಎಎಂಎಂಕೆ ಏಕೈಕ ಶಾಸಕ ಎಸ್ ಕಾಮರಾಜ್ ಅವರ ಬೆಂಬಲದ ಕುರಿತು ಎರಡೂ ಪಕ್ಷಗಳ ನಡುವೆ ರಾಜಕೀಯ ಘರ್ಷಣೆ ಹೆಚ್ಚುತ್ತಿರುವ ಮಧ್ಯೆ ಈ ದೂರು ಸಲ್ಲಿಕೆಯಾಗಿದೆ. ಶಾಸಕ ಕಾಮರಾಜ್ ಅವರ ಪತ್ರದ ‘ನಕಲಿ ಪ್ರತಿಯನ್ನು’ ಟಿವಿಕೆ ರಾಜ್ಯಪಾಲರೊಂದಿಗೆ ಹಂಚಿಕೊಂಡಿದೆ ಎಂದು ಟಿಟಿವಿ ದಿನಕರನ್ ಆರೋಪಿಸಿದ್ದರು. ಈ ಬೆನ್ನಲ್ಲೇ ಟಿವಿಕೆ ವಿಜಯ್ ನೇತೃತ್ವದ ಪಕ್ಷವನ್ನು ಬೆಂಬಲಿಸಿ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೋವನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಕಲಿ ಪತ್ರ ಎಂಬ ದಿನಕರನ್ ಅವರ ಹೇಳಿಕೆಯನ್ನು ಟಿವಿಕೆ ವಿರೋಧಿಸಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಬೀದಿ ನಾಯಿ ದಾಳಿಗೆ 5 ತಿಂಗಳ ಕಂದಮ್ಮ ದುರ್ಮರಣ
ಟಿವಿಕೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಾಮರಾಜ್ ಪತ್ರ ಬರೆದು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಅನುಮೋದನೆಯೊಂದಿಗೆ ಟಿವಿಕೆಗೆ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತಿರುವುದು ಕಂಡುಬರುತ್ತದೆ. ದಿನಕರನ್ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಟಿವಿಕೆ ಆರೋಪಿಸಿದೆ. ಇದನ್ನೂ ಓದಿ: ಬಹುಮತಕ್ಕೆ 2 ಸ್ಥಾನ ಕೊರತೆ – ಇಂದೂ ದಳಪತಿ ವಿಜಯ್ ಪದಗ್ರಹಣ ಡೌಟ್!

