ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ಆಟಗಾರರ ಸುರಕ್ಷತೆ ಮತ್ತು ಪಂದ್ಯದ ಪಾರದರ್ಶಕತೆ ಕಾಪಾಡುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಕ್ರಮಕೈಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳಿಗೂ 7 ಪುಟಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಹನಿಟ್ರ್ಯಾಪ್ ಬಗ್ಗೆ ಎಚ್ಚರಿಕೆ: ಆಟಗಾರರು ಮತ್ತು ಸಿಬ್ಬಂದಿ ಹನಿ ಟ್ರ್ಯಾಪ್ ಜಾಲಕ್ಕೆ ಬೀಳದಂತೆ ಬಿಸಿಸಿಐ ಎಚ್ಚರಿಸಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹೊರಗಡೆ ವ್ಯವಹರಿಸುವಾಗ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಅಲೆನ್ ಸ್ಫೋಟಕ ಶತಕ; ಡೆಲ್ಲಿ ವಿರುದ್ಧ ಕೋಲ್ಕತ್ತಾಗೆ 8 ವಿಕೆಟ್‌ಗಳ ಭರ್ಜರಿ ಜಯ
ಹೋಟೆಲ್ ಕೊಠಡಿಗೆ ನಿರ್ಬಂಧ: ತಂಡದ ವ್ಯವಸ್ಥಾಪಕರ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿಗಳು ಆಟಗಾರರ ಅಥವಾ ಕೋಚಿಂಗ್ ಸಿಬ್ಬಂದಿಯ ಹೋಟೆಲ್ ಕೊಠಡಿಗಳಿಗೆ ಪ್ರವೇಶಿಸುವಂತಿಲ್ಲ.
ಸಂಚಾರಕ್ಕೆ ಅನುಮತಿ ಕಡ್ಡಾಯ: ಆಟಗಾರರು ಅಥವಾ ಸಿಬ್ಬಂದಿ ಹೋಟೆಲ್ ಆವರಣದಿಂದ ಹೊರಗೆ ಹೋಗಬೇಕಾದರೆ ನಿಯೋಜಿತ ಭದ್ರತಾ ಸಂಪರ್ಕ ಅಧಿಕಾರಿಗಳಿಂದ ಕಡ್ಡಾಯ ಅನುಮತಿ ಪಡೆಯಬೇಕು.
ಐಡಿ ಕಾರ್ಡ್ ಧರಿಸಬೇಕು: ಸ್ಟೇಡಿಯಂ, ಹೋಟೆಲ್ ಮತ್ತು ಅಭ್ಯಾಸದ ಅವಧಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ತಮ್ಮ ಐಡಿ ಕಾರ್ಡ್ ಧರಿಸಿರಬೇಕು.
ಮಾಲೀಕರಿಗೆ ಡಗೌಟ್ ನಿರ್ಬಂಧ: ಪಂದ್ಯ ನಡೆಯುತ್ತಿರುವ ಸಮಯದಲ್ಲಿ ತಂಡದ ಮಾಲೀಕರು ಡಗೌಟ್‌ನಲ್ಲಿರುವ ಆಟಗಾರರು ಅಥವಾ ಮ್ಯಾನೇಜರ್‌ಗಳೊಂದಿಗೆ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಂದ್ಯದ ಮೇಲೆ ಪ್ರಭಾವ ಬೀರದಂತೆ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ.
ಐಪಿಎಲ್‌ನಂತಹ ಟೂರ್ನಿಯಲ್ಲಿ ಭ್ರಷ್ಟಾಚಾರ ಮತ್ತು ಫಿಕ್ಸಿಂಗ್‌ನಂತಹ ಅಕ್ರಮಗಳು ನಡೆಯದಂತೆ ತಡೆಯುವುದೇ ಬಿಸಿಸಿಐನ ಉದ್ದೇಶವಾಗಿದೆ. ಇದನ್ನೂ ಓದಿ: ಸೂರ್ಯಕುಮಾರ್‌ಗೆ ಬಿಗ್ ಶಾಕ್ ಸಾಧ್ಯತೆ – ಶ್ರೇಯಸ್ ಅಯ್ಯರ್ ಭಾರತದ T20I ಕ್ಯಾಪ್ಟನ್?

