ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರದಿಂದ ಯುರೋಪ್ ರಾಷ್ಟ್ರಗಳಾದ ಫ್ರಾನ್ಸ್ (France) ಮತ್ತು ಸ್ಲೊವಾಕಿಯಾಗೆ (Slovakia) ಪ್ರವಾಸ ಕೈಗೊಂಡಿದ್ದಾರೆ.
ಮೋದಿಯವರ ಈ ಪ್ರವಾಸವು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲು ಫ್ರಾನ್ಸ್ಗೆ ಭೇಟಿ ನೀಡುತ್ತಾರೆ. ಬಳಿಕ ಅಲ್ಲಿಂದ ಸ್ಲೊವಾಕಿಯಾಗೆ ತೆರಳಿ, ಮತ್ತೆ ಫ್ರಾನ್ಸ್‌ಗೆ ಹಿಂದಿರುಗಲಿದ್ದಾರೆ. ವಿಶೇಷವೆಂದರೆ 1993ರಲ್ಲಿ ಸ್ಲೊವಾಕಿಯಾ ಸ್ವತಂತ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪೋದು ಅಮೆರಿಕದ ಹುಟ್ಟುಗುಣ – 5 ಬೇಡಿಕೆ ಒಪ್ಪಿದರಷ್ಟೇ ಸಂಧಾನ ಎಂದ ಇರಾನ್
ಪ್ರಧಾನಿ ಮೋದಿಯವರು ತಮ್ಮ ಫ್ರಾನ್ಸ್ ಪ್ರವಾಸದ ಭಾಗವಾಗಿ ಭಾನುವಾರ ನೈಸ್ ನಗರಕ್ಕೆ ಹೋಗಲಿದ್ದಾರೆ. ಅಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಉಭಯ ದೇಶಗಳ ಬಾಂಧವ್ಯವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಎಂದು ಬಣ್ಣಿಸಲಾಗಿತ್ತು. ಇದನ್ನೂ ಓದಿ: ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ನಟ ದೊಡ್ಡಣ್ಣ
ಈ ಬಾರಿಯ ಸಭೆಯಲ್ಲಿ ಉಭಯ ನಾಯಕರು ಎರಡೂ ದೇಶಗಳ ನಡುವಿನ ಒಟ್ಟಾರೆ ಸಂಬಂಧದ ಪ್ರಗತಿ ಪರಿಶೀಲಿಸಲಿದ್ದಾರೆ. ಇದೇ ವೇಳೆ ಫ್ರಾನ್ಸ್ ಆಯೋಜಿಸಿರುವ ಭಾರತ್ ಇನ್ನೋವೇಟ್ಸ್ ಕಾರ್ಯಕ್ರಮವನ್ನು ಇಬ್ಬರೂ ನಾಯಕರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತ, ಫ್ರಾನ್ಸ್ ಮತ್ತು ಇತರ ದೇಶಗಳ ಸ್ಟಾರ್ಟ್ಅಪ್‌ಗಳು ಹಾಗೂ ಹೂಡಿಕೆದಾರರನ್ನು ಒಂದೇ ವೇದಿಕೆಗೆ ತರಲಿದೆ. ಜೊತೆಗೆ ಉಭಯ ದೇಶಗಳ ನಡುವಿನ ತಂತ್ರಜ್ಞಾನ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದರ್ಶನ ಪಡೆದ ನಿರ್ಮಲಾ ಸೀತಾರಾಮನ್
ಫ್ರಾನ್ಸ್‌ನ ಮೊದಲ ಹಂತದ ಪ್ರವಾಸ ಮುಗಿಸಿ ಜೂನ್ 14 ಮತ್ತು 15 ರಂದು ಪ್ರಧಾನಿ ಮೋದಿ ಸ್ಲೊವಾಕಿಯಾಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಉಭಯ ದೇಶಗಳ ನಡುವಿನ ಪರಸ್ಪರ ಸಹಕಾರವನ್ನು ವೃದ್ಧಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ, ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನ್ ಅವರನ್ನೂ ಭೇಟಿಯಾಗಲಿದ್ದಾರೆ. ಈ ಭೇಟಿಯ ಮುಖ್ಯ ಉದ್ದೇಶ ವ್ಯಾಪಾರ, ಹೂಡಿಕೆ, ಆಟೋಮೊಬೈಲ್ ಮತ್ತು ರೈಲ್ವೆ ಉತ್ಪಾದನಾ ವಲಯಗಳಲ್ಲಿ ಸ್ಲೊವಾಕಿಯಾ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿದೆ. ಇದನ್ನೂ ಓದಿ: ಕೇರಳ ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ಇತ್ತೀಚೆಗಷ್ಟೇ 2025ರ ಏಪ್ರಿಲ್‌ನಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಲೊವಾಕಿಯಾಗೆ ಭೇಟಿ ನೀಡಿದ್ದರು. ಕಳೆದ ಫೆಬ್ರವರಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಸ್ಲೊವಾಕಿಯಾ ಅಧ್ಯಕ್ಷ ಪೆಲ್ಲೆಗ್ರಿನ್ ಭಾರತಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಭೇಟಿಯು ಉಭಯ ದೇಶಗಳ ಸ್ನೇಹಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆ ಲವ್ ಜಿಹಾದ್ ಪ್ರಕರಣ: ಗರಗ ಸಿಪಿಐ ತಲೆದಂಡ
ಜಿ-7 ಶೃಂಗಸಭೆ:
ಸ್ಲೊವಾಕಿಯಾ ಪ್ರವಾಸ ಮುಗಿಸಿಕೊಂಡು ಪ್ರಧಾನಿ ಮೋದಿಯವರು ಜೂನ್ 16 ಮತ್ತು 17 ರಂದು ಫ್ರಾನ್ಸ್‌ನ ಎವಿಯನ್ ನಗರದಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅವರು ಜಿ-7 ಒಕ್ಕೂಟದ ಪ್ರಮುಖ ನಾಯಕರು ಹಾಗೂ ಇತರ ದೇಶಗಳ ಮುಖ್ಯಸ್ಥರೊಂದಿಗೆ ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಶೃಂಗಸಭೆಯ ನಡುವೆಯೇ ಅವರು ವಿಶ್ವದ ಹಲವು ಪ್ರಮುಖ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆಗೆ ʻಆಪರೇಷನ್ ಹಸ್ತʼದ ಭೀತಿ – ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್?
ತಮ್ಮ ಪ್ರವಾಸದ ಕೊನೆಯ ದಿನದಂದು ಮೋದಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಮತ್ತಷ್ಟು ರಾಜತಾಂತ್ರಿಕ ಮಾತುಕತೆ ನಡೆಸಲಾಗುತ್ತದೆ. ಜೊತೆಗೆ ಯುರೋಪ್‌ನ ಅತಿ ದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಮೇಳವಾಗಿರುವ ವಿವಾಟೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಪ್ಯಾರಿಸ್‌ನಲ್ಲಿ ನೆಲೆಸಿರುವ ಭಾರತದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಸ್ಸಾಂನ ಜೋರ್ಹತ್‌ನಲ್ಲಿ ಭಾರತೀಯ ವಾಯುಪಡೆಯ AN-32 ಸಾರಿಗೆ ವಿಮಾನ ಪತನ
