CricketLatestLeading NewsMain PostSports

ಪಂತ್, ರಾಹುಲ್ ಹೋರಾಟ ವ್ಯರ್ಥ – ಟೆಸ್ಟ್ ಬಳಿಕ ಏಕದಿನ ಸರಣಿ ಸೋತ ಟೀಂ ಇಂಡಿಯಾ

ಜೋಹನ್ಸ್‌ಬರ್ಗ್: ಭಾರತದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

ಟೆಸ್ಟ್ ಸರಣಿ ಸೋತ ಭಾರತಕ್ಕೆ ಇದೀಗ ಏಕದಿನ ಸರಣಿ ಕೂಡ ಕೈ ತಪ್ಪಿದೆ. ಗೆಲ್ಲಲು 288 ರನ್‍ಗಳ ಗುರಿ ಪಡೆದ ಆಫ್ರಿಕಾ 48.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಇನ್ನು 11 ಎಸೆತ ಬಾಕಿ ಇರುವಂತೆ 288 ರನ್ ಬಾರಿಸಿ ಗೆಲುವಿನ ಕೇಕೆ ಹಾಕಿತು. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

ಆಫ್ರಿಕಾ ಪರ ಜನೆಮನ್ ಮಲನ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭದಲ್ಲೇ ಅಬ್ಬರಿಸಿ ಬೊಬ್ಬಿರಿದರೂ. ಈ ಜೋಡಿ ಮೊದಲ ವಿಕೆಟ್‍ಗೆ 132 ರನ್ (132 ಎಸೆತ)ಗಳ ಉತ್ತಮ ಆರಂಭ ನೀಡಿತು. ಡಿ ಕಾಕ್ 78 ರನ್ (66 ಎಸೆತ, 7 ಬೌಂಡರಿ, 3 ಸಿಕ್ಸ್) ಮತ್ತು ಮಲನ್ 91 ರನ್ (108 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.

ಆರಂಭಿಕ ಜೋಡಿ ಔಟ್ ಆದ ಬಳಿಕ ಬಂದ ತೆಂಬ ಬವುಮ 35 ರನ್ (36 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮಕ್ರಾರ್ಮ್ ಅಜೇಯ 37 ರನ್‌ (41 ಎಸೆತ, 4 ಬೌಂಡರಿ) ಮತ್ತು ವ್ಯಾನ್ ಡೆರ್ ಡಸ್ಸೆನ್ 37 ರನ್‌ (38 ಎಸೆತ, 2 ಬೌಂಡರಿ) ಸಿಡಿಸಿ ಆಫ್ರಿಕಾಗೆ 7 ವಿಕೆಟ್‌ಗಳ ಗೆಲವು ತಂದು ಕೊಟ್ಟರು.

ರಾಹುಲ್, ಪಂತ್ ಹೋರಾಟ ವ್ಯರ್ಥ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ 29 ರನ್ (38 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರೆ, ನಂತರ ಬಂದ ವಿರಾಟ್ ಕೊಹ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು. ಇದನ್ನೂ ಓದಿ: ಐಸಿಸಿ ವರ್ಷದ ಟಿ20, ಏಕದಿನ ತಂಡದಲ್ಲಿಲ್ಲ ಭಾರತೀಯರು – ಪಾಕ್‌ ಆಟಗಾರರ ಮೇಲುಗೈ

ಒಂದು ಕಡೆ ವಿಕೆಟ್ ಬಿದ್ದರು ನಾಯಕನ ಆಟವಾಡಿದ ರಾಹುಲ್ 55 ರನ್ (79 ಎಸೆತ, 4 ಬೌಂಡರಿ) ಸಿಡಿಸಿ ಮಿಂಚಿದರೆ, ರಿಷಭ್ ಪಂತ್ ಅಬ್ಬರದ 85 ರನ್ (71 ಎಸೆತ, 10 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡಕ್ಕೆ ಕೊಡುಗೆ ನೀಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಅಂತಿಮವಾಗಿ ಶಾರ್ದೂಲ್ ಠಾಕೂರ್ ಅಜೇಯ 40 ರನ್ (38 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಆರ್ ಅಶ್ವಿನ್ 25 ರನ್ (24 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 50 ಓವರ್‌ಗಳಲ್ಲಿ ತಂಡದ ಮೊತ್ತವನ್ನು 280 ಗಡಿದಾಟಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತು.

ಆಫ್ರಿಕಾ ಪರ ಶಮ್ಸಿ 2 ವಿಕೆಟ್ ಪಡೆದರೆ, ಕೇಶವ್ ಮಹರಾಜ್, ಮಕ್ರಾರ್ಮ್, ಫೆಹ್ಲುಕ್ವಾಯೊ, ಸಿಸಂದ ಮಗಲಾ ತಲಾ 1 ವಿಕೆಟ್ ಕಿತ್ತರು.

Leave a Reply

Your email address will not be published.

Back to top button