ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಕಸ ಮುಕ್ತ ನಗರ ಮಾಡಲು ಜಿಬಿಎ (GBA) ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಡೆಯಲು ಕಸ ಬಿಸಾಡುವ ಜಾಗಕ್ಕೆ ಪರದೆ ಅಸ್ತ್ರ ಬಳಸಲು ಮುಂದಾಗಿದೆ.
ಬೆಂಗಳೂರು (Bengaluru) ನಗರದಲ್ಲಿ ಕೆಲವು ಜನ ಅನಾಗರಿಕರಂತೆ ವರ್ತಿಸ್ತಿದ್ದಾರೆ. ರಸ್ತೆ, ಫುಟ್‌ಪಾತ್ ಸೇರಿ ಎಲ್ಲೆಂದರಲ್ಲಿ ಕಸ ಎಸೆದು ನಗರದ ಸೌಂದರ್ಯವನ್ನ ಕೆಡಿಸ್ತಿದ್ದಾರೆ. ಕಸಮುಕ್ತ ನಗರ ಮಾಡೋದಕ್ಕೆ ಜಿಬಿಎ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಕಸ ಬಿಸಾಡುವ ಭಾಗಗಳಲ್ಲಿ ಪರದೆಯನ್ನ ಕಟ್ಟಿದ್ದು, ಕಸ ಬಿಸಾಡೋದನ್ನ ತಡೆಯಲಾಗ್ತಿದೆ. ಇದನ್ನೂ ಓದಿ: ಮೇಲುಕೋಟೆ ದೇವಸ್ಥಾನದಲ್ಲಿ ಕಳ್ಳತನ – ಅರ್ಚಕ, ಸಿಬ್ಬಂದಿ ವಿರುದ್ಧ ಕೇಸ್
ಈ ಹಿಂದೆ ಕಸ ಹಾಕಿದವ್ರನ್ನ ಪತ್ತೆ ಹಚ್ಚಿ, ಅವ್ರ ಮನೆಯ ಮುಂದೆ ಕಸ ಸುರಿದು ದಂಡ ಹಾಕಿ, ಜಾಗೃತಿ ಮೂಡಿಸಲಾಗಿತ್ತು. ಕೆಲ ದಿನಗಳ ಬಳಿಕ ಕಸ ಬಿಸಾಡೋದನ್ನ ಕಡಿಮೆ ಮಾಡಿದ್ದ ಜನ ಮತ್ತೆ ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದಾರೆ. ಹೀಗಾಗಿ ಜಿಬಿಎ ನಗರದ ಹಲವೆಡೆ ಪರದೆಗಳನ್ನ ಕಟ್ಟಿದೆ. ಜಿಬಿಎ ಸ್ಥಳೀಯ ಇಂಜಿನಿಯರ್‌ಗಳ ಜೊತೆಗೆ ಸ್ಥಳೀಯ ಸಂಘ, ಸಂಸ್ಥೆಗಳು ಕೂಡ ಸಹಕರಿಸ್ತಿವೆ.
ಇದೇ ರೀತಿ ದೀಪಾಂಜಲಿ ನಗರದಲ್ಲಿಯೂ ಪರದೆಯನ್ನು ಕಟ್ಟಿದ್ದಾರೆ. ಜಿಬಿಎನ ಈ ಹೊಸ ಪ್ರಯತ್ನಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಕಸಮುಕ್ತ ನಗರ ಮಾಡುವ ಸಂಕಲ್ಪ ಹೊತ್ತ ಜಿಬಿಎಗೆ ಜನ ಸಹಕರಿಸಬೇಕಿದೆ. ಸ್ವಯಂಪ್ರೇರಿತವಾಗಿ ಕಸ ಬಿಸಾಡೋದನ್ನ ನಿಲ್ಲಿಸಿ ಬೆಂಗಳೂರು ಸೌಂದರ್ಯಕ್ಕೆ ಸಹಕರಿಸಬೇಕಿದೆ.ಇದನ್ನೂ ಓದಿ: ಮುಖ್ಯಮಂತ್ರಿ ಹೆಸರಿನಲ್ಲೇ ಓಂ ಸಾಯಿ ಪ್ರಕಾಶ್ ಸಿನಿಮಾ
