ಚಂಡೀಗಢ: ಆನ್‌ಲೈನ್ ಗೇಮಿಂಗ್‌ನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿ ಮೂವರು ಸ್ನೇಹಿತರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್‌ನ (Punjab) ನವಾಂಶಹರ್ ಜಿಲ್ಲೆಯಲ್ಲಿ ನಡೆದಿದೆ.

ಮೂವರ ಪೈಕಿ ಪರಮ್‌ಜೀತ್ ಸಿಂಗ್ ಖಾಲ್ಸಾ (13) ಹಾಗೂ ದಿಲ್‌ಪ್ರೀತ್ ಸಿಂಗ್ (21) ಮೃತಪಟ್ಟಿದ್ದು, ಮರಿಂದರ್ ಸಿಂಗ್ (15) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದಾಖಲೆ ಬರೆದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾ
ಆ.10ರಂದು ದಿಲ್‌ಪ್ರೀತ್ ಸಿಂಗ್ ತನ್ನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ, ವಿಷ ಸೇವಿಸುವುದಾಗಿ ತಿಳಿಸಿದ್ದ. ಕೂಡಲೇ ಅವರಿಬ್ಬರು ಸ್ಥಳಕ್ಕೆ ಆಗಮಿಸಿದರು. ಬಳಿಕ ಮೂವರು ಸ್ನೇಹಿತರು ಸೇರಿಕೊಂಡು ವಿಷಪೂರಿತ ಆಹಾರ ಸೇವಿಸಿದ್ದರು. ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪರಮ್‌ಜೀತ್ ಸಿಂಗ್ ಸಾವನ್ನಪ್ಪಿದ್ರೆ, ಮಾರನೇ ದಿನ ಆ.11ರಂದು ದಿಲ್‌ಪ್ರೀತ್ ಸಿಂಗ್ ಮೃತಪಟ್ಟ. ಇನ್ನೂ ಮರಿಂದರ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೂವರು ಆಪ್ತ ಸ್ನೇಹಿತರಾಗಿದ್ದು, ಈ ಪೈಕಿ ಓರ್ವ ಆನ್‌ಲೈನ್ ಗೇಮ್‌ಗಳನ್ನು ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಇದರಿಂದ ಆತ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಅಲ್ಲದೇ ಕುಟುಂಬದವರಿಂದಲೂ ಒತ್ತಡವಿತ್ತು. ಆತನ ಸಾವಿನ ಬಳಿಕವೂ ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಸಮಾಜದ ಬಗ್ಗೆ ಗೌರವವಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡಲಿ: ವಿಜಯೇಂದ್ರ
