CricketLatestLeading NewsMain PostSports

Womens Asia Cup: ರಿಚಾ ಘೋಷ್ ವಿಫಲ ಹೋರಾಟ – ಪಾಕ್ ವಿರುದ್ಧ ಭಾರತಕ್ಕೆ ಸೋಲು

ಢಾಕಾ: ಮಹಿಳಾ ಏಷ್ಯಾಕಪ್ (Womens Asia Cup) ಲೀಗ್ ಹಂತದ ಪಂದ್ಯದಲ್ಲಿ ಭಾರತ (India) ವಿರುದ್ಧ ಪಾಕಿಸ್ತಾನ (Pakistan) 13 ರನ್‍ಗಳ ಜಯ ಸಾಧಿಸಿದೆ.

ಪಾಕಿಸ್ತಾನ ನೀಡಿದ 138 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ 19.4 ಓವರ್‌ಗಳಲ್ಲಿ 124 ರನ್‍ಗಳಿಗೆ ಆಲೌಟ್ ಆಗಿ 13 ರನ್‍ಗಳಿಂದ ವಿರೋಚಿತ ಸೋಲುಂಡಿದೆ. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

ಭಾರತ ಪರ ಆರಂಭಿರಾಗಿ ಕಣಕ್ಕಿಳಿದ ಸಬ್ಬಿನೇನಿ ಮೇಘನಾ 15 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಸ್ಮೃತಿ ಮಂಧಾನ 17 ರನ್ (19 ಎಸೆತ, 2 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಹೇಮಲತಾ 20 ರನ್ (22 ಎಸೆತ, 3 ಬೌಂಡರಿ), ದೀಪ್ತಿ ಶರ್ಮಾ 16 ರನ್, ಹರ್ಮನ್‍ಪ್ರೀತ್ ಕೌರ್ 12 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಇನ್ನೊಂದೆಡೆ ಗೆಲುವಿಗಾಗಿ ಹೋರಾಡಿದ ರಿಚಾ ಘೋಷ್ 26 ರನ್ (13 ಎಸೆತ, 1 ಬೌಂಡರಿ, 3 ಸಿಕ್ಸ್) 18.3ನೇ ಓವರ್‌ನಲ್ಲಿ ಔಟ್ ಆಗುತ್ತಿದ್ದಂತೆ ಭಾರತದ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 19.4 ಓವರ್‌ಗಳ ಅಂತ್ಯಕ್ಕೆ 124 ರನ್‍ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

ಪಾಕ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ನಶ್ರಾ ಸಂಧು 3 ವಿಕೆಟ್ ಪಡೆದು ಭಾರತದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ನಿದಾ ದಾರ್ ಮತ್ತು ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಹಂಚಿಕೊಂಡರೆ, ಐಮನ್ ಅನ್ವರ್ ತುಬಾ ಹಸನ ತಲಾ 1 ವಿಕೆಟ್ ಕಿತ್ತರು.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ದೀಪ್ತಿ ಶರ್ಮಾ ಕಂಠಕವಾದರು. ಬಿಸ್ಮಾ ಮರೂಫ್ 32 ರನ್ (35 ಎಸೆತ, 2 ಬೌಂಡರಿ) ಮತ್ತು ನಿದಾ ದಾರ್ ಅಜೇಯ 56 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ಭಾರತದ ಬೌಲರ್‌ಗಳು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಲಷ್ಟೇ ಶಕ್ತವಾಗುವಂತೆ ನೋಡಿಕೊಂಡರು. ಭಾರತದ ಪರತ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ 2 ಮತ್ತು ರೇಣುಕಾ ಸಿಂಗ್ 1 ವಿಕೆಟ್ ತನ್ನದಾಗಿಸಿಕೊಂಡರು.

Live Tv

Leave a Reply

Your email address will not be published. Required fields are marked *

Back to top button