‘ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ದೊಡ್ಮನೆ ಶೋ ಮುಗಿದ ಬಳಿಕ ನಯಾ ಫೋಟೋಶೂಟ್ ಮೂಲಕ ನಟಿ ಅನುಪಮಾ ಗೌಡ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
View this post on Instagram
ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದರು. ಕಿರುತೆರೆಯಿಂದ ಹಿರಿತೆರೆಗೆ ಬಂದ ನಟಿ ಅನುಪಮಾ ಇತ್ತೀಚಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಛಾಪು ಮೂಡಿಸಿದ್ದರು.
View this post on Instagram
ದೊಡ್ಮನೆಯ ಆಟದ ನಂತರ ಮತ್ತೆ ಸಿನಿಮಾದಲ್ಲಿ ಮಿಂಚಲು ತೆರೆಮರೆಯಲ್ಲಿ ನಟಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಸದ್ಯ ನೀಲಿ ಬಣ್ಣದ ಡ್ರೆಸ್ನಲ್ಲಿ ಅನುಪಮಾ ಮಿರ ಮಿರ ಎಂದು ಮಿಂಚಿದ್ದಾರೆ. ಶಾರ್ಟ್ ಕೂದಲು ಬಿಟ್ಟು ಬ್ಲೂ ಡ್ರೆಸ್ನಲ್ಲಿ ನಟಿ ಕಂಗೊಳಿಸಿದ್ದಾರೆ. ಅನುಪಮಾ ನಗುವಿಗೆ ನಟಿಯ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಯುವ ರಾಜ್ಕುಮಾರ್ ಚೊಚ್ಚಲ ಸಿನಿಮಾಗೆ ನಾಯಕಿ ಫಿಕ್ಸ್
View this post on Instagram
ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ಪ್ರೇಮಿಗಳ ದಿನದಂದು ವಿಶೇಷ ಸಂಚಿಕೆಯೊಂದನ್ನ ನಡೆಸಿಕೊಟ್ಟಿದ್ದರು. ಇದೀಗ ಅನುಪಮಾ ಅವರ ಹೊಸ ಸಿನಿಮಾದ ಅಪ್ಡೇಟ್ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k